nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ

    November 5, 2025

    ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ

    November 5, 2025

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ

    November 5, 2025
    Facebook Twitter Instagram
    ಟ್ರೆಂಡಿಂಗ್
    • ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
    • ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
    • ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
    • ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
    • ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
    • ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
    • ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
    • ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪ್ರಕೃತಿ ಮಡಿಲಿನಲ್ಲಿ ‘ಅಡವಿ’ ಚಿತ್ರೀಕರಣ | ಅಡವಿಯೊಳು ಟೈಗರ್ ಘರ್ಜನೆ
    ಸ್ಪೆಷಲ್ ನ್ಯೂಸ್ January 2, 2023

    ಪ್ರಕೃತಿ ಮಡಿಲಿನಲ್ಲಿ ‘ಅಡವಿ’ ಚಿತ್ರೀಕರಣ | ಅಡವಿಯೊಳು ಟೈಗರ್ ಘರ್ಜನೆ

    By adminJanuary 2, 2023No Comments3 Mins Read
    team adavi
    • ಮಂಜುಸ್ವಾಮಿ.ಎಂ.ಎನ್.

    ಕೊರಟಗೆರೆ: ಕನ್ನಡದಲ್ಲಿ ಈಗಾಗಲೇ ಧ್ವನಿ ಇಲ್ಲದವರ ಕುರಿತ ಸಿನಿಮಾಗಳು ಮೂಡಿಬಂದು ಸಾಕಷ್ಟು ಸದ್ದುಮಾಡಿವೆ. ಕಾಡೇ ನಮ್ಮ ಬದುಕು ಅಂದುಕೊಂಡು ಬದುಕುತ್ತಿರುವ ಬಡಜನರ ಬದುಕಿನ ಚಿತ್ರಣವನ್ನು ಸಾಕಷ್ಟು ಚಿತ್ರಗಳು ತೋರಿಸಿವೆ. ಅಂತಹ ಸಿನಿಮಾಗಳ ಸಾಲಿಗೆ ಈಗ ಅಡವಿ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾದ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವಿಶೇಷ ವರದಿ ಇದು…

    ಕನ್ನಡ ಬೆಳ್ಳಿತೆರೆಗೆ ಬರಲು ಸಿದ್ದವಾಗಿರುವ ಅಡವಿ ಎಂಬ ಸಿನಿಮಾ ಒಂದರ್ಥದಲ್ಲಿ ಕಾಡು ಮಕ್ಕಳ ಕರುಳಿನ ಕೂಗು.. ನೊಂದ ಹೃದಯಗಳ ಆರ್ತನಾದ. ಅನಾದಿ ಕಾಲದಿಂದಲೂ ಅರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿ ಬುಡಕಟ್ಟು ಜನರ ಸಾಮಾಜಿಕ ಜನಜೀವನ, ಕಾಡಿನ ಸಂಸ್ಕೃತಿ, ದೈವಾಚರಣೆ, ಆರ್ಥಿಕತೆ ಮತ್ತು ಆಳುವ ನಾಗರಿಕ ವರ್ಗಗಳ ವಿರುದ್ದದ ಸಂಘರ್ಷವನ್ನು ತುಂಬಾನೇ ಪರಿಣಾಮಕಾರಿಯಾಗಿ ಅಡವಿ ಜನರ ಭೂಮಿ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಯನ್ನು ಗಂಭೀರವಾಗಿ ಚಿತ್ರೀಕರಣ ಮಾಡಲಾಗಿದೆ.


    Provided by
    Provided by

    ಕಲೆಯೇ ತನ್ನ ದೈವ ಅಂದುಕೊಂಡು ಸದಾ ಹೋರಾಟದ ಹಾದಿಯಲ್ಲಿ ದಿನ ಸವೆಸುತ್ತಿರುವ ಜನಪರ ಕಾಳಜಿಯುಳ್ಳ ಟೈಗರ್ ನಾಗ್ ಈ ಸಿನಿಮಾದ ನಿರ್ದೇಶಕ. ಅಂದಹಾಗೇ ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನ ಅಡಿಯಲ್ಲಿ ಮೊದಲ ಸಿನಿಮಾ ಮುಗಿಸಿರುವ ಖುಷಿಯಲ್ಲಿ ಟೈಗರ್ ನಾಗ್ ಮತ್ತು ಅವರ ಚಿತ್ರತಂಡವಿದೆ. ಅಡವಿ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಬಿಡುಗಡೆಗೆ ಬೇಕಾದ ಕೆಲಸಗಳನ್ನು ಚಿತ್ರತಂಡವು ತಯಾರಿ ನಡೆಸುತ್ತಿದೆ.

    ಅಡವಿ ಚಿತ್ರಕ್ಕಾಗಿ ಸಿದ್ದರಬೆಟ್ಟ ಅರಣ್ಯದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲು ಹಟ್ಟಿಯ ಸೆಟ್ ಹಾಕಿ ಚಿತ್ರೀಕರಣ ನಡೆದಿದೆ. ಹಿರಿಯ ಕಲಾ ನಿರ್ದೇಶಕ ಬಾಬುಖಾನ್ ಅವರ ಕಲಾ ನಿರ್ದೇಶನವಿದೆ. ಕಲಾ ಸಹಾಯಕರ ತಂಡ ಹಗಲಿರುಳನ್ನದೇ ಶ್ರಮಿಸಿ ಗುಡಿಸಲ ಹಟ್ಟಿಯ ಸೆಟ್ ಜೊತೆಗೆ ಸಿದ್ದರಬೆಟ್ದದಲ್ಲೇ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಸೆಟ್ ಕೂಡ ನಿರ್ಮಾಣ ಮಾಡಿ ಅದ್ದೂರಿಯಾಗಿ ಚಿತ್ರಿಕರಣ ಮುಗಿಸಿದ್ದಾರೆ.

    ನಾಯಕರಾಗಿ ಮೋಹನಮೌರ್ಯ, ಮಾಸ್ಟರ್ ಚಿರುಶ್ರೀ ನಾಗ್, ಅರುಂಧತಿಲಾಲ್, ಜಗದೀಶ್ ಮಹಾದೇವ್, ಹ.ರಾ.ಮಹಿಷಾ, ಕುಣಿಗಲ್ ರಮೇಶ್, ಅರ್ಜುನ್ ಪಾಳೇಗಾರ್, ಟೈಗರ್ನಾಗ್ ರವಿಕುಮಾರ್ ಸಾನ, ಆರ್.ಅನಂತರಾಜ್, ರಥವಾರಂ ದೇವ್ರು, ಶಿಲ್ಪಾನಾಗ್, ವಾಲೆಚಂದ್ರು, ರಾಮನಾಯಕ್, ವೃಶ್ಚಿಕ, ಮಂಜೀವ, ಸರಸ್ಪತಿ, ಬೇಬಿ ಸಿಂಚನ, ಶಿವಾನಂದ, ಕೆ.ಆರ್.ಓಬಳರಾಜು, ಸೇರಿದಂತೆ ಇತರರು ನಟಿಸಿದ್ದಾರೆ.

    ಅಡವಿ ಚಿತ್ರದ ನಿರ್ದೇಶಕರಾಗಿ ಕೊರಟಗೆರೆಯ ಟೈಗರ್ ನಾಗ್, ನಿರ್ಮಾಪಕ ಮಧುಗಿರಿ ಸಾಧಿಕ್ ಸಾಬ್, ಛಾಯಾಗ್ರಹಣ ವಿಪಿನ್ ರಾಜ್, ಸಂಗೀತಾ ಜೂಡಾ ಸ್ಯಾಂಡಿ, ಸಂಭಾಷಣೆ ಸಾಯಿರಾಮ್, ಸಾಹಸ ಕೆ.ಮಂಜುನಾಥ್, ಸಹ ನಿರ್ದೇಶಕ ಪುಟ್ಟರಾಜು, ದಯಾನಂದ್ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅಡವಿ ಚಿತ್ರದ ಸಂಕಲನ ಕಾರ್ಯದಲ್ಲಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

    ಅಡವಿ ಚಿತ್ರದ ಚಿತ್ರಕಥೆ ಏನು..?

    ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಬಡಜನರ ಬದುಕು ಬವಣೆಯ ನಿಜಜೀವನವೇ ಚಿತ್ರಕಥೆಯ ಪ್ರಮುಖ ಸಾರಂಶ. ಶೋಷಿತ ವರ್ಗದ ಕಥೆ ಆಧಾರಿತ ಸಿನಿಮಾದಲ್ಲಿ ತಳ ಸಮುದಾಯದ ನೋವು ಮುಖ್ಯಪಾತ್ರ ವಹಿಸಲಿದೆ. ಆದಿವಾಸಿ ಜನತೆ ಮತ್ತು ಪ್ರಸ್ತುತ ವ್ಯವಸ್ಥೆಯ ಸಂಘರ್ಷವು ತೆರೆದಿಡುವ ಪ್ರಯತ್ನವು ಕಥೆಯಲ್ಲಿ ಅಡಗಿದೆ. ಅಡವಿ ಚಿತ್ರದಲ್ಲಿ ಮೂರು ಹಾಡು ಮತ್ತು ಎರಡು ಭರ್ಜರಿ ಸಾಹಸ ದೃಶ್ಯಗಳಿವೆ.

    ಎಲ್ಲೆಲ್ಲಿ ಅಡವಿ ಚಿತ್ರಿಕರಣ ನಡೆದಿದೆ..!

    ಕರ್ನಾಟಕದ ಪ್ರಥಮ ದಲಿತದೊರೆ ಕುರಂಗರಾಯ ಆಳಿದಂತಹ ಐತಿಹಾಸಿಕ ಸಿದ್ದರಬೆಟ್ಟ, ಸಿದ್ದಸಾಧು ಸಂತರ ತಪೋಭೂಮಿ ಆಗಿರುವ ಸಸ್ಯ ಸಂಜೀವಿನಿ ಕ್ಷೇತ್ರ, ಸೂರ್ಯನ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆಯ ಸುಪ್ರಸಿದ್ದ ಪ್ರಕೃತಿಯ ಸುಂದರ ಪ್ರವಾಸಿ ತಾಣಗಳಲ್ಲಿ ಅಡವಿ ಚಿತ್ರವನ್ನು ಚಿತ್ರಕರಣ ಮಾಡಲಾಗಿದೆ.

    ಹತ್ತಾರು ಹಿಟ್ ಚಿತ್ರಗಳ ಚಿತ್ರೀಕರಣ..

    ವಿಷ್ಣುವರ್ಧನ್ ಅಭಿನಯದ ಬಂಗಾರದ ಜಿಂಕೆ, ಅಂಬರೀಶ್ ನಟನೆಯ ಏಳು ಸುತ್ತಿನಕೋಟೆ ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳು ಕೊರಟಗೆರೆಯ ಚನ್ನರಾಯನ ದುರ್ಗ ಮತ್ತು ಸಿದ್ದರಬೆಟ್ಟದ ಪ್ರಕೃತಿಯ ಮಡಿಲಿನಲ್ಲಿ ಚಿತ್ರಿಕರಣವಾಗಿವೆ. ಪ್ರಸ್ತುತ ಕೊರಟಗೆರೆಯ ಟೈಗರ್ ನಾಗರಾಜು ನಿರ್ದೇಶನದ ಅಡವಿ ಚಿತ್ರವು ಸದ್ದಿಲ್ಲದೇ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

    tigernag

    ದ್ರಾವಿಡ ಸಂಸ್ಕೃತಿಯ ಪರಂಪರೆ ಮತ್ತು ಪ್ರಕೃತಿಯ ಸಂಪತ್ತನ್ನು ಉಳಿಸುವ ಪ್ರಯತ್ನವೇ ಅಡವಿ. ಕಾಡು ಜನರ ಜೀವನ ಮತ್ತು ಉಳ್ಳವರ ನಡುವಿನ ಸಂಘರ್ಷಣೆಯೇ ಚಿತ್ರದ ಸಾರಾಂಶ. ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಪ್ರಕೃತಿ ತಾಯಿಯ ಆರ್ಶಿವಾದದಿಂದ ಅಡವಿ ಚಿತ್ರದ ಚಿತ್ರೀಕರಣ ಮುಗಿದಿದೆ. ಕೊರಟಗೆರೆಯ ಯುವ ನಿರ್ದೇಶಕನ ಮೇಲೆ ನಿಮ್ಮೇಲ್ಲರ ಆರ್ಶಿವಾದ ಇರಲಿ ಎಂದು ಪ್ರಾರ್ಥಿಸುವೆ.

    -ಟೈಗರ್ ನಾಗರಾಜು, ಯುವ ನಿರ್ದೇಶಕ, ಕೊರಟಗೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

    October 10, 2025

    ಟ್ರಂಪ್‌ ಅವರದು ‘ಪುಂಡ’ ವ್ಯಾಪಾರ ನೀತಿ: ಭಾರತದ ಪರ ನಿಂತ ಚೀನಾ!

    August 8, 2025

    ಅವಳ ತುಟಿ ಮಷಿನ್‌ ಗನ್‌: ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯ ಸೌಂದರ್ಯ ಹೊಗಳಿದ ಟ್ರಂಪ್!

    August 4, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ

    November 5, 2025

    ಸರಗೂರು:   ಜಯಲಕ್ಷ್ಮೀಪುರ ಗ್ರಾಮಸ್ಥರು ಒತ್ತಾಯದ ಮೇರೆಗೆ ತಾಲೂಕಿನಿಂದ ಜಯಲಕ್ಷೀಪುರ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ತಾಲೂಕಿನ ಶಾಸಕರಾದ ಅನಿಲ್…

    ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ

    November 5, 2025

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ

    November 5, 2025

    ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ

    November 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.