ಪಾವಗಡ: ತಾಲ್ಲೂಕಿನ ಯ.ನಾ.ಹೊಸಕೋಟೆ ಗ್ರಾಮದ ದೊಡ್ಡಹಳ್ಳಿಗೆ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ನೂರಾರು ಜನರು ಪ್ರತಿನಿತ್ಯ ಸಂಚರಿಸುವ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲೆಗೆ ತೆರಳುವ ಪುಟಾಣಿ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ನಾಗರಿಕರು ನಡೆದುಕೊಂಡು ಹೋಗುತ್ತಿದ್ದು, ನೀರಿನ ಮೇಲೆ ಹಾಕಿರುವ ಕಲ್ಲುಗಳ ಮೇಲೆ ಕಾಲು ಇಟ್ಟುಕೊಂಡು ನರಕದ ದಾರಿ ಹಾದು ಹೋಗುವಂತೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಸಮಸ್ಯೆಯ ಬಗ್ಗೆ ವೈ ಎನ್ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಶ್ರೀರಾಮ ನಾಯ್ಕ ಅವರು ಎರಡು ಬಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋದರೂ, ಇನ್ನೂ ಕೂಡ ನರಕದ ದಾರಿಗೆ ಮುಕ್ತಿ ಸಿಕ್ಕಿಲ್ಲ.
ಸುಮಾರು 2 ತಿಂಗಳುಗಳಿಂದ ಇದೇ ರೀತಿಯ ಸ್ಥಿತಿ ಇದ್ದು, ಇಲ್ಲಿಂದ ನಿತ್ಯ ಸಂಚರಿಸುವ ಜನರು ಅಧಿಕಾರಿ ವರ್ಗಗಳಿಗೆ, ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡು ತೆರಳುತ್ತಿದ್ದಾರೆ. ಯಾರಾದರೂ ಸಾರ್ವಜನಿಕರು ಬಿದ್ದು, ಪ್ರಾಣ ಕಳೆದುಕೊಂಡ ಬಳಿಕ ಬರುತ್ತೇವೆ ಎಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆಯೇ? ಎಂದು ಇಲ್ಲಿನ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ವರದಿ: ನಂದೀಶ್ ನಾಯ್ಕ್, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz