ಬಳ್ಳಾರಿ: ಜೆಡಿಎಸ್ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳಿಗೆ ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಟಾಂಗ್ ನೀಡಿದ್ದಾರೆ.
ಇಲ್ಲಿ ನನ್ನ ಮುಖ ನೋಡಿಯೋ, ಇನ್ನೊಬ್ಬರ ಮುಖ ನೋಡಿಯೋ ಜನ ಮತ ಹಾಕಲ್ಲ, ಪ್ರಧಾನಿ ಮೋದಿಯವರ ಮುಖ ನೋಡಿ ಮತ ಹಾಕ್ತಾರೆ. ಕಲ್ಯಾಣ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲಲಿದೆ, ಇಲ್ಲಿ ಪ್ರಾದೇಶಿಕ ಪಕ್ಷದ ಮಾತೇ ಇಲ್ಲ ಎಂದು ಅವರು ಟಾಂಗ್ ನೀಡಿದ್ದಾರೆ.
ಜನಾರ್ದನ ರೆಡ್ಡಿ ಅವರ ಪಕ್ಷದ ಕುರಿತು ಪರೋಕ್ಷವಾಗಿಯೇ ಟಾಂಗ್ ನೀಡಿದ ಶ್ರೀರಾಮುಲು, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದ್ರೂ ಪಕ್ಷ ಕಟ್ಟ ಬಹುದು. ಆದ್ರೆ, ಜನರ ಒಲವು ಕೂಡ ಬೇಕಲ್ವಾ? ಎಂದು ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


