ಹೊಸ ವರ್ಷದಲ್ಲಿ ಅಪರಾಧಗಳನ್ನು ತಡೆಯಲು ಪೊಲೀಸರು ಪ್ರಾಣಿಬಲಿ ಮಾಡಿರುವ ಘಟನೆ ತಮಿಳುನಾಡಿನ ದಿಂಡಿಗಲ್ ನ ವಡಮಧುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವೇದಸಂದೂರು ತಾಲೂಕಿನ ಅಯ್ಯಲೂರಿನ ವಂದಿ ಕರುಪ್ಪನಸಾಮಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆಯಿತು. ವೇದಸಂದೂರು ಉಪಾಧೀಕ್ಷಕಿ ದುರ್ಗಾದೇವಿ, ವಡಮಧುರ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿ ಮುರುಗನ್ ನೇತೃತ್ವದಲ್ಲಿ ಪ್ರಾಣಿ ಬಲಿ ನಡೆಯಿತು. ಮೇಕೆ ಬಲಿ ನೀಡಿ ಪೊಂಗಲ್ ಅರ್ಪಿಸಿ ಪೊಲೀಸ್ ತಂಡ ವಾಪಸಾದರು. ದೇವಸ್ಥಾನದಲ್ಲಿ ನಡೆದ ಸಂತೆಯಲ್ಲಿ ಬಲಿ ನೀಡಿದ ಮೇಕೆಗಳನ್ನು ಹುರಿದು ಬಡಿಸಲಾಯಿತು.
ಹೊಸ ವರ್ಷದಲ್ಲಿ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧವನ್ನು ಕಡಿಮೆ ಮಾಡಲು ಪ್ರಾಣಿ ಬಲಿ ದೇವರಿಗೆ ಅರ್ಪಿಸುವ ಭಾಗವಾಗಿತ್ತು. ತಮಿಳುನಾಡಿನ ವಿವಿಧ ದೇವಾಲಯಗಳಲ್ಲಿ ಪೂಜೆಯ ಅಂಗವಾಗಿ ಪ್ರಾಣಿ ಬಲಿಗಳನ್ನು ನಡೆಸಲಾಗುತ್ತದೆ. 1960ರಲ್ಲಿ ಕೇಂದ್ರ ಸರ್ಕಾರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ದೇಶದ ದೇವಸ್ಥಾನಗಳಲ್ಲಿ ಪ್ರಾಣಿಬಲಿ ನಿಷೇಧಿಸಿತ್ತು. ಈ ಆದೇಶದ ಹೊರತಾಗಿಯೂ, ತಮಿಳುನಾಡಿನಲ್ಲಿ ಕಾನೂನು ಪರಿಪಾಲಕರಿಂದಲೇ ಪ್ರಾಣಿಬಲಿ ನಡೆದಿರುವುದು ವಿಪರ್ಯಾಸ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


