ತಮಿಳುನಾಡು :ಪಲ್ಲಡಂ ಸಮೀಪದ ಗಣಪತಿಪಾಳ್ಯಂ ಪಂಚಾಯಿತಿ ಮಲಯಂಪಾಳ್ಯದಲ್ಲಿ ವಾಸವಿದ್ದ ಮರುದಾಚಲಂ ಅವರ ಪುತ್ರ ಶಿವಾನಂದಂ ಅವರು ಸಲೂನ್ ನಡೆಸುತ್ತಿದ್ದರು. ಶಿವಾನಂದ ಅವರ ತಾಯಿ ಕಂದಮ್ಮಾಳ್ ಅವರು ಕೆಲವು ತಿಂಗಳ ಹಿಂದೆ ನಿಧನರಾದರು.
ತಾಯಿಯ ಸಾವಿನ ದುಃಖದಿಂದ ಶಿವಾನಂದ ಅವರು ನರಳಾಡುತ್ತಿದ್ದರು ಎನ್ನಲಾಗಿದೆ. ನಿನ್ನೆ ಶಿವಾನಂದಂ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಮೇಲ್ಛಾವಣಿಯ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊರಗೆ ಹೋಗಿದ್ದ ತಂದೆ ಮನೆಗೆ ಹಿಂತಿರುಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡು ಬೆಚ್ಚಿಬಿದ್ದಿದ್ದಾನೆ. ಈ ಬಗ್ಗೆ ಪಲ್ಲಡಂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮರುದಾಚಲಂ ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲಕ್ಕೆತ್ತಿ ಪಲ್ಲಡಂ ಸರಕಾರಿ ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


