ಸಿನಿಮಾ ಹಾಲ್ ಅಥವಾ ಮಲ್ಟಿಪ್ಲೆಕ್ಸ್‌ಗಳಿಗೆ ಪ್ರೇಕ್ಷಕರು ಹೊರಗಿನ ಆಹಾರ ಕೊಂಡೊಯ್ಯಬಹುದೇ ಎಂಬ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.
ಹೊರಗಿನ ಆಹಾರ, ಪಾನೀಯಗಳನ್ನು ಸಿನಿಮಾ ಥಿಯೇಟರ್ ಅಥವಾ ಮಲ್ಟಿಪ್ಲೆಕ್ಸ್‌ಗಳಿಗೆ ವೀಕ್ಷಕರು ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಥಿಯೇಟರ್ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಿನಿಮಾ ಹಾಲ್‌ಗಳಿಗೆ ಪ್ರೇಕ್ಷಕರು ಹೊರಗಿನ ಆಹಾರ ಕೊಂಡೊಯ್ಯಬಹುದೇ ಎಂಬ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಈ ತೀರ್ಪು ನೀಡಿದೆ.
ಸಿನಿಮಾ ಹಾಲ್ ಜಿಮ್ ಅಲ್ಲ. ಇಲ್ಲಿ ಪ್ರೇಕ್ಷಕರು ತಮ್ಮಿಚ್ಚೆಯಂತೆ ಆಹಾರ, ಪಾನೀಯಗಳನ್ನು ಕೊಂಡೊಯ್ಯುವುದನ್ನು ನಿಯಮತ್ರಿಸುವ ಹಕ್ಕನ್ನು ಥಿಯೇಟರ್ ಗಳ ಮಾಲೀಕರು ಹೊಂದಿದ್ದಾರೆ. ಮಾಲೀಕರು ನೀಡುವ ಆಹಾರ ಹಾಗೂ ಪಾನೀಯಗಳನ್ನಷ್ಟೇ ವೀಕ್ಷಕರು ಸಿನಿಮಾ ಹಾಲ್ ಒಳಗೆ ಕೊಂಡೊಯ್ಯಬಹುದು. ಹೆತ್ತವರು ಶಿಶುಗಳಿಗೆ ಬೇಕಾದ ಆಹಾರವನ್ನು ಚಿತ್ರಮಂದಿರದೊಳಗೆ ಕೊಂಡೊಯ್ದಂತಹ ಸಂದರ್ಭದಲ್ಲಿ ಅದಕ್ಕೆ ವಿರೋಧ ಮಾಡಬಾರದು ಎಂದು ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


