ಬೆಳ್ಳಂ ಬೆಳಗ್ಗೆ ಮೈಸೂರಿನಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು 5 ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಬೆಳ್ಳಿಗೆ 7.15 ರಲ್ಲಿ ಮೈಸೂರಿನ ಬನ್ನಿಮಂಟಪದ ಬಳಿ ಇರುವ ಅಗ್ನಿಶಾಮಕ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಹಾಲು ಕಾಯಿಸಲು ಹೋಗಿ ಈ ದುರ್ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ 5 ಜನರಿಗೆ ಗಾಯಗಳಾಗಿದೆ.
ಘಟನೆಯಲ್ಲಿ ಗೀತಾ(34) ಮಗಳು ಮೌನ(10) ಮಗ ಮಿತ್ತುನ್(6) ಹಾಗೂ ಪಕ್ಕದ ಮನೆ ಸವಿತಾ (38) ಭಾಗ್ಯಮ್ಮ(62)ಗೆ ಗಾಯಗಳಾಗಿದೆ. ಗೃಹಿಣಿ ಗೀತಾ(34)ಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನ ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


