ಪಾವಗಡ: ಶಾಸಕರಾದ ವೆಂಕಟರಮಣಪ್ಪ ನವರು ಇಂದು ಪಾವಗಡ ತಾಲ್ಲೂಕಿನ ರಂಗಸಮುದ್ರ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಸಮುದಾಯ ಭವನ ಉದ್ಘಾಟನೆ ಹಾಗೂ ವಿವಿಧೆಡೆಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ದೊಡ್ಡೇನಹಳ್ಳಿಯಲ್ಲಿ 13.90 ವೆಚ್ಚದ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಚಳ್ಳಕೆರೆ-ಪಾವಗಡ ರಸ್ತೆಯ ಚಿಕ್ಕತಿಮ್ಮನಹಟ್ಟಿ ಗ್ರಾಮದ 50 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಗೋವರ್ಧನ ಗಿರಿ ಬಳಿ 15 ಲಕ್ಷ ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ, ವದನಕಲ್ ತಿಪ್ಪೆರುದ್ರ ಸ್ವಾಮಿ ದೇವಸ್ಥಾನ ಬಳಿ 10 ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು ವದನಕಲ್ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಗುದ್ದಲಿ ಪೂಜೆ, ಮಲ್ಲಮ್ಮನಹಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಲಿಂಗದಹಳ್ಳಿ-ಸಾಸಲಕುಂಟೆ (ಮುಂದುವರೆದ) 1.50 ಕೋಟಿ ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ, ಸಾಸಲಕುಂಟೆ ಗ್ರಾಮದಲ್ಲಿ 13.90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಕೆಂಚಮ್ಮನಹಳ್ಳಿ ಗ್ರಾಮದಲ್ಲಿ 13.90 ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಕೆಂಚಮ್ಮನಹಳ್ಳಿ-ಮಲ್ಲಮ್ಮನಹಳ್ಳಿ 50 ಲಕ್ಷ ವೆಚ್ಚದ ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ ವೆಂಕಟೇಶ್, ಕೆಪಿಸಿಸಿ ಸದಸ್ಯ ಕೆ.ಎಸ್. ಪಾಪಣ್ಣ, ಶಂಕರ್ ರೆಡ್ಡಿ, ಪುರಸಭಾ ಸದಸ್ಯ ರಾಜೇಶ್,ಸಣ್ಣ ರಾಮರೆಡ್ಡಿ, ಮಲ್ಲಣ್ಣ, ರುದ್ರ ಮುನಿ, ಚಂದ್ರಶೇಖರ ರೆಡ್ಡಿ, ಅಜಿತ್, ರಘು ನಂದನ್, ಎಪಿಎಂಸಿ ಮಾಜಿ ಅಧ್ಯಕ್ಷ ಮಾರಣ್ಣ, ಕರಿಯಣ್ಣ, ನಾಗರಾಜಪ್ಪ, ಗೋಪಾಲ್ ಗೌಡ, ನಾಗೇಂದ್ರ ನಾಯಕ, ಹಾಲಿ ಗ್ರಾ.ಪಂ.ಸದಸ್ಯ ವದನಕಲ್ಲು ಬ್ರಹ್ಮಹೇಂದ್ರಚಾರಿ, ವಿ.ಎನ್.ತಿಮ್ಮರೆಡ್ಡಿ (ಪಟೇಲ್), ಆನಂದಚಾರ್, ಹನುಮಂತರೆಡ್ಢಿ, ಗ್ರಾ.ಪಂ.ಮಾಜಿ ಸದಸ್ಯರಂಗಪ್ಪ, ರಾಮಾಲಿಂಗಪ್ಪ, ತಿಪ್ಪೇರುದ್ರಪ್ಫ, ರಾಮಾದಾಸಪ್ಪ , ಸಾಸಲಕುಂಟೆ ರಾಜು, ಹನುಮಂತು, ಮದನ್ ರೆಡ್ಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಗೌಡಪ್ಪ, ಮಂಜುನಾಥ್ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ರಾಮಲಿಂಗ ರೆಡ್ಡಿ, ಗೋವರ್ಧನಗಿರಿ ಗ್ರಾಮದ ಯರ್ರಪ್ಪ, ಚಿತ್ತಣ್ಣ, ವೀರಭದ್ರಪ್ಪ, ಜಯಣ್ಣ ಜೆ.ಸಿ.ಬಿ.ತಿಪ್ಪೇಸ್ವಾಮಿ ಸೇರಿ ಇನ್ನೂ ಹಲವಾರು ಮಂದಿ ಉಪಸ್ಥಿತರಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz