ಹೆಚ್.ಡಿ.ಕೋಟೆ: ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ಉಪ ದಂಡಾಧಿಕಾರಿಗಳಾದ ಸಣ್ಣ ರಾಮಪ್ಪ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲೆ ಮತ್ತು ಕಾಲೇಜಿನ ಮಕ್ಕಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಂಬಾಕು ಸೇವನೆಯಿಂದ ಆಗುವ ಮತ್ತು ಆಗಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ರಸ್ತೆ ಬದಿ ವ್ಯಾಪಾರಿಗಳಿಗೆ ಗುಲಾಬಿ ನೀಡಿ ಈ ದಿನದಿಂದಲೇ ಬಿಡಿ ಸಿಗರೇಟ್ ಮತ್ತು ತಂಬಾಕಿಗೆ ಸಂಬಂಧಿಸಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡದಂತೆ ಹಾಗೂ ಸೇವಿಸಿದಂತೆ ಮನವಿ ಮಾಡಿದರು.
ಇದೇ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ .ರವಿಕುಮಾರ್ ಮಾತನಾಡಿ, ಇಂದಿನ ಯುವ ಜನಾಂಗದಲ್ಲಿ ಮೋಜಿಗಾಗಿ ಶುರು ಮಾಡುವ ಬೀಡಿ, ಸಿಗರೇಟ್ ಸೇವನೆ ಮುಂದಿನ ದಿನಗಳಲ್ಲಿ ಅವು ನಮ್ಮ ದೇಹವನ್ನೇ ತಿನ್ನುತ್ತವೆ ಎನ್ನುವ ಅರಿವು ಕೂಡ ಇರುವುದಿಲ್ಲ. ಧೂಮಪಾನದಿಂದ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಸುಳ್ಳು. ಇನ್ನೂ ಬೀಡಿ ಅಥವಾ ಸಿಗರೇಟ್ ಸೇದುವುದರಿಂದ ರಕ್ತದಲ್ಲಿ ಪರಿಚಲನೆ ಉಂಟಾಗಿ ಇನ್ನೂ ಒತ್ತಡ ಹೆಚ್ಚಾಗುತ್ತಿದೆ. ಆರೋಗ್ಯ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಹಾಗಾಗಿ ತಂಬಾಕು ಸೇವನೆಯಿಂದ ದೂರ ಇದ್ದರೆ ಉತ್ತಮ ಎಂದು ಸಲಹೆ ನೀಡಿದರು.
ತಂಬಾಕಿನಿಂದ ಬರುವ ಶ್ವಾಸಕೋಶ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ವಸಡು ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ರೋಗಗಳ ಬಗ್ಗೆ ಇದೇ ವೇಳೆ ಅರಿವು ಮೂಡಿಸಲಾಯಿತು. ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಪರಾಗ್ ಸೇರಿದಂತೆ ಇನ್ನಿತರ ತಂಬಾಕಿನಿಂದ ತಯಾರಾಗುವ ವಸ್ತುಗಳನ್ನು ಸೇವಿಸದೆ ದೂರ ಉಳಿಯುವಂತೆ ಹೂ ನೀಡಿ ಮನವಿ ಮಾಡಲಾಯಿತು. ಅಲ್ಲದೇ, 2003 ಕೋಟ್ಬಾ ಅಡಿಯಲ್ಲಿ ತಂಬಾಕು ಮಾರಾಟ ಮಾಡಿದವರಿಗೆ 200 ದಂಡ ವಿಧಿಸಲಾಗುತ್ತದೆ ಎಂಬ ಕಾನೂನು ಅರಿವು ಕೂಡ ಇದೇ ವೇಳೆ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ B.R.P ಕೃಷ್ಣಪ್ಪ, ರಾಮ್ ಪ್ರಸಾದ್, ಆರೋಗ್ಯ ಇಲಾಖೆಯ ರವಿರಾಜ್, ಪ್ರತಾಪ್ ಹಾಗೂ ಶಾಲೆ ಮತ್ತು ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ, ಹೆಚ್.ಡಿ.ಕೋಟೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


