ಉತ್ತರ ಪ್ರದೇಶದಲ್ಲಿ ನಜ್ರಾನಾ ಎಂಬ ಮಹಿಳೆ ಹೊಟ್ಟೆ ನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯ ಹೆರಿಗೆಗೆ ಸಹಕರಿಸಿದರು. ಆದರೆ ಆಪರೇಷನ್ ವೇಳೆ ಟವೆಲ್ ಮರೆತು ಹೊಟ್ಟೆಗೆ ಹೊಲಿಗೆ ಹಾಕಿದ್ದಾರೆ.
ಇದರಿಂದ ನಜ್ರಾನಾಗೆ ಹೊಟ್ಟೆನೋವು ಉಂಟಾಗಿದೆ. ತೀವ್ರ ಹೊಟ್ಟೆನೋವಿನ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದು, ವಿಪರೀತ ಚಳಿಯಿಂದಾಗಿ ಎಂದು ಹೇಳಿದ್ದಾರೆ. ಆದರೆ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು, ಮತ್ತೊಮ್ಮೆ ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಟವೆಲ್ ಹೊರತೆಗೆದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


