250ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ರಾಮನಗರದ ಪೊಲೀಸ್ ಶ್ವಾನ ‘ರಾಮ್’ ನಿಧನಹೊಂದಿದೆ. 2017ರಲ್ಲಿ ಜಿಲ್ಲಾ ಪೊಲೀಸ್ ಘಟಕಕ್ಕೆ ಸೇರ್ಪಡೆಗೊಂಡಿದ್ದ ಹೆಮ್ಮೆಯ ಶ್ವಾನ, 6 ವರ್ಷ ಸೇವೆ ಸಲ್ಲಿಸಿ ಹೃದಯಾಘಾತದಿಂದ ಮೃತಪಟ್ಟಿದೆ.
30 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಶಂಸೆಗೆ ಪಾತ್ರವಾಗಿತ್ತು. ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ‘ರಾಮ್’ ನಿಧನಕ್ಕೆ ಪೊಲೀಸ್ ಅಧಿಕಾರಿಗಳು ಕಂಬನಿ ಮಿಡಿದರು.
ರಾಮನಗರ ಜಿಲ್ಲೆಯ ಪೊಲೀಸ್ ಘಟಕದಲ್ಲಿ ಸುಮಾರು 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾ ಶ್ವಾನ ರಾಮ್ 250 ಕ್ಕೂ ಹೆಚ್ವು ಪ್ರಕರಣಗಳಲ್ಲಿ ಭಾಗಿಯಾಗಿ ಆರೋಪಿಗಳ ಪತ್ತೆ ಹಚ್ಚುವಲ್ಲಿ ನಿರತವಾಗಿತ್ತು.
ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು. ಇದರಿಂದಾಗಿಯೇ ಜಿಲ್ಲಾ ಪೊಲೀಸ್ ಘಟಕದಲ್ಲಿ ಅತ್ಯಂತ ಪ್ರೀತಿ ಪಾತ್ರವಾಗಿತ್ತು. ಎಲ್ಲರ ಸ್ನೇಹವನ್ನು ಬಯಸದಿದ್ದರೂ, ಒಮ್ಮೆ ಪೊಲೀಸರನ್ನು ಹಚ್ಚಿಕೊಂಡರೆ ಅವರಿಗೆ ತುಂಬಾ ಆತ್ಮೀಯತೆಯಿಂದ ಇರುತ್ತಿತ್ತು. ಆದರೆ, ಇಂದು ರಾಮ್ ಶ್ವಾನ ಹೃದಯಾಘಾತಕ್ಕೆ ಒಳಗಾಗಿ ದಿಢೀರನೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ: ಅಪರಾಧ ಪತ್ತೆ ದಳದ ರಾಮ್ ಶ್ವಾನವನ್ನು ಜಿಲ್ಲಾ ಪೊಲೀಸ್ ಘಟಕದಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಚನ್ನಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ರಾಮ್ ಶ್ವಾನ ನಿಧನಕ್ಕೆ ರಾಮನಗರ ಜಿಲ್ಲಾ ಪೊಲೀಸರ ಸಂತಾಪ ಸೂಚಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


