ಬೆಂಗಳೂರಿನಲ್ಲಿ ರಾಜ್ಯದ ಪ್ರಥಮ ವನ್ಯಜೀವಿ ವಿಧಿ ವಿಜ್ಞಾನಗಳ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು, ಇದಕ್ಕೆ ರಾಜ್ಯ ಸರ್ಕಾರ 12.7 ಕೋಟಿ ಅನುದಾನ ನೀಡಲು ಒಪ್ಪಿದೆ.
ಮಾರ್ಚ್‌ನಿಂದ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ವನ್ಯಜೀವಿಗಳ ಮೇಲಿನ ಅಪರಾಧಗಳ ಬಗ್ಗೆ ತನಿಖೆ ನಡೆಸಲು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಈ ಪ್ರಯೋಗಾಲಯ ನೆರವಾಗಲಿದೆ.ಈವರೆಗೆ ಸ್ಯಾಂಪಲ್‌ಗಳನ್ನು ಡೆಹ್ರಾಡೂನ್ ಅಥವಾ ಹೈದರಾಬಾದ್‌ನಲ್ಲಿದ್ದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿತ್ತು.
ಕಳೆದ ಒಂದು ದಶಕದಿಂದ ಪ್ರಯೋಗಾಲಯ ಸ್ಥಾಪನೆಯ ಪ್ರಸ್ತಾವನೆ ಚರ್ಚೆಯಲ್ಲಿದ್ದು, ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದೆ. ವನ್ಯಜೀವಿಗಳ ಮೇಲಿನ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಈ ಪ್ರಯೋಗಾಲಯ ನೆರವಾಗಲಿದೆ. ಇದರಿಂದ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ನೆರವಾಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


