ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿ ವತಿಯಿಂದ 2022-23ನೇ ಸಾಲಿಗೆ RKVY ಯೋಜನೆಯಡಿಯಲ್ಲಿ ಪಶುಭಾಗ್ಯ ಆಧಾರಿತ ಕಾರ್ಯಕ್ರಮವಾದ “ಮುಖ್ಯ ಮಂತ್ರಿಗಳ ಅಮೃತ ಯೋಜನೆ” ಅನುಷ್ಠಾನ ಗೊಳಿಸಲು ಆದ್ಯತೆಯ ಮೇರೆಗೆ ಫಲಾನುಭವಿಗಳನ್ನಾಗಿ ಕೂಲಿ ಕೃಷಿ ಕಾರ್ಮಿಕರು ಮತ್ತು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ 01 ಮಿಶ್ರ ತಳಿ ಹಾಲು ಕರೆಯುವ ಹಸು/01 ಸುದಾರಿತ ಎಮ್ಮೆ ವಿತರಿಸಲಾಗುವುದು. ಘಟಕದ ಮೊತ್ತ ರೂ. 62,000/- ಆಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.33.33% ಅಂದರೆ ರೂ. 20,665/- ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.25% ಅಂದರೆ ರೂ. 15,500/- ಸಹಾಯಧನ ಒದಗಿಸಲಾಗುವುದು.
ಸಹಾಯಧನವನ್ನು ಹೊರತು ಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯುವುದು. ಸದರಿ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ.33.3), ಅಲ್ಪಸಂಖ್ಯಾತರಿಗೆ (ಶೇ.15), ವಿಕಲ ಚೇತನರಿಗೆ(ಶೇ.3)ರಷ್ಟು ಆಧ್ಯತೆ ನೀಡಲಾಗುವುದು.
ಅರ್ಹ ಫಲಾನುಭವಿಗಳು ಭರ್ತಿಮಾಡಿದ ಅರ್ಜಿಗಳನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ(ಆಡಳಿತ) ಸಲ್ಲಿಸಲು ಕೊನೆಯ ಜನವರಿ 20, 2023 ರೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥಣ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಂ.ಎಸ್.ಹುಂಡೇಕಾರ ಮೋ.ಸಂಖ್ಯೆ 9448305513 ಅಥವಾ ದೂರವಾಣಿ ಸಂಖ್ಯೆ 08289-251007, ಕಾಗವಾಡ, ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಂ.ಎಸ್.ಹುಂಡೇಕಾರ ಮೋ.ಸಂಖ್ಯೆ 9448305513 ಅಥವಾ ದೂರವಾಣಿ ಸಂಖ್ಯೆ 08289-251007, ಬೈಲಹೊಂಗಲ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಈರಣ್ಣಾ ಕೋಲಾರ ಮೋ.ಸಂಖ್ಯೆ 9448346935 ಅಥವಾ ದೂರವಾಣಿ 08288-295299, ಕಿತ್ತೂರ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಬಿ.ಪಿ.ಹಿರೇಮಠ ಮೋ.ಸಂಖ್ಯೆ 9972996209 ಅಥವಾ ದೂರವಾಣಿ 08288-286234, ಬೆಳಗಾವಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಆನಂದ ಪಾಟೀಲ ಮೋ.ಸಂಖ್ಯೆ 9448148822 ಅಥವಾ ದೂರವಾಣಿ 08288-286234, ಚಿಕ್ಕೋಡಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎಸ್.ಎಂ.ಉಪ್ಪಾರ ಮೋ.ಸಂಖ್ಯೆ 9448859656 ಅಥವಾ ದೂರವಾಣಿ 08338-272203, ನಿಪ್ಪಾಣಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಜಯಕುಮಾರ ಕಂಕಣವಾಡಿ ಮೋ.ಸಂಖ್ಯೆ 9110418330 ಅಥವಾ ದೂರವಾಣಿ 08338-290556, ಗೋಕಾಕ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಮೋಹನ ಕಮತ ಮೋ. ಸಂಖ್ಯೆ 9986280456 ಅಥವಾ ದೂರವಾಣಿ 08332-226809, , ಮೂಡಲಗಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಮೋಹನ ಕಮತ ಮೋ. ಸಂಖ್ಯೆ 9986280456 ಅಥವಾ ದೂರವಾಣಿ 08332-226809, ಖಾನಾಪೂರ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಎ.ಎಸ್.ಕೂಡಗಿ ಮೋ. ಸಂಖ್ಯೆ 8073028448 ಅಥವಾ ದೂರವಾಣಿ 08336-222488, ರಾಯಭಾಗ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ರಾಮು ರಾಠೋಡ ಮೋ. ಸಂಖ್ಯೆ 9449661871 ಅಥವಾ ದೂರವಾಣಿ 08331-225530, ರಾಮದುರ್ಗ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಗಿರೀಶ ಪಾಟೀಲ ಮೋ. ಸಂಖ್ಯೆ 9945854277 ಅಥವಾ ದೂರವಾಣಿ 08335-242117 ಹಾಗೂ ಸವದತ್ತಿ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ: ಅನಿಲ ಮರಲಿಂಗಣ್ಣವರ ಮೋ. ಸಂಖ್ಯೆ 9449518864 ಅಥವಾ ದೂರವಾಣಿ 08337-254294 ಗೆ ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ: ರಾಜೀವ ಎನ್. ಕೂಲೇರ ರವರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


