ಬೆಳಗಾವಿ : 2022-23 ನೇ ಸಾಲಿಗೆ ಇಲಾಖೆಯ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಜಿಲ್ಲೆಯ ದೈಹಿಕ ವಿಕಲಚೇತನರಿಂದ ಸೌಲಭ್ಯಕ್ಕಾಗಿ ಶೇಕಡಾ 75 ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರುವ ಕನಿಷ್ಠ 20 ವರ್ಷ ಗರಿಷ್ಠ 60 ವರ್ಷ ವಯೋಮಿತಿಗೊಳಪಟ್ಟ ವಿಕಲಚೇತನ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಲಗತ್ತಿಸಬೇಕಾದ ದಾಖಲಾತಿಗಳು:
ವಿಕಲಚೇತನರ ಯು.ಡಿ.ಐ.ಡಿ.ಕಾರ್ಡ್ (75% ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರತಕ್ಕದ್ದು), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ ಪಡೆದಿರಬೇಕು. ವಾಹನ ಚಾಲನಾ ಪ್ರಮಾಣ ಪತ್ರ.
ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಯಸ್ಸಿನ ದಾಖಲಾತಿ. ಸ್ವಂತ ಉದ್ಯೋಗ/ ಖಾಸಗಿ ನೌಕರಿ / ಶಿಕ್ಷಣದ ಬಗ್ಗೆ ದೃಢೀಕರಣ ಹಾಗೂ ಸದರಿ ಸೌಲಭ್ಯವನ್ನು ಯಾವುದೇ ಮೂಲದಿಂದ ಪಡೆದಿರುವುದಿಲ್ಲವೆಂಬ ದೃಢೀಕರಣ ಸಲ್ಲಿಸಬೇಕು.
ಬೆಳಗಾವಿ ಜಿಲ್ಲೆಯ ದೈಹಿಕ ವಿಕಲಚೇತನರು ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿ ಪ್ರತಿಯಲ್ಲಿ ಈ ಕೆಳಕಾಣಿಸಿದ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 20, 2023ರ ವರೆಗೆ ಸಲ್ಲಿಸಬಹುದಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


