ಪಾವಗಡ: ಮಕ್ಕಳು, ಪೋಷಕರ ಹಾಗೂ ಶಿಕ್ಷಕ ವೃಂದದ ಮಧ್ಯೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಜಗತ್ತನ್ನೇ ಗೆಲ್ಲಬಹುದೆಂದು ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಾವಗಡ ಪಟ್ಟದ ಹೆಸರಾಂತ ಶಾಲೆಯಾದ ಜ್ಞಾನಭೋದಿನಿ ಆಂಗ್ಲ ಮಾಧ್ಯಮ ಪ್ರೌಢಶಾಲಯ 30ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಪೋಷರಿಗಿಂತ ಹೆಚ್ಚಾಗಿ ಶಿಕ್ಷಕರು ಕಂಡುಹಿಡಿಯಲು ಸಾಧ್ಯ. ಇತ್ತೀಚಿನ ದಿನದಲ್ಲಿ ತಂದೆ ತಾಯಿಯ ಒಡನಾಟಕ್ಕಿಂತ ಶಿಕ್ಷಕರ ಒಡನಾಟವೇ ಹೆಚ್ಚು. ಹಾಗಾಗಿ ಪಠ್ಯ ಹಾಗೂ ಜ್ಞಾನದ ಬಗ್ಗೆ ಹೆಚ್ಚು ಶಿಕ್ಷಕರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿವೇಕಾನಂದರ ವಿಚಾರಧಾರೆಗಳನ್ನು ಮಕ್ಕಳು ತಮ್ಮಜೀವನ ಶೈಲಿಯಲ್ಲಿ ಬಳಸಿಕೊಂಡು, ತಮ್ಮ ನಿತ್ಯದ ಪಠ್ಯದ ಜೊತೆಯಲ್ಲಿ ಅವರ ಆದರ್ಶಗಳನ್ನು ರೂಡಿಸಿಕೊಳ್ಳಬೇಕು. ಅದು ನಿಮ್ಮ ಜೀವನದಲ್ಲಿ ಬದಲಾವಣೆ ಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಅನಿಲ್ ಕುಮಾರ್, ಈ ನಮ್ಮ ಸಂಸ್ಥೆಗೆ ಇಂದಿಗೆ 30 ವರ್ಷ ಪೂರ್ಣಗೊಂಡಿದೆ. ಈ ಬಾರಿ ಶಾಲೆಯಲ್ಲಿ ಕೃತಿಕ ಕಾರ್ಯಕ್ರಮಗಳು, ಕ್ರೀಡೆಗಳು, ಪೋಷಕರಿಗೂ ಸಹ ಕ್ರೀಡೆ ಹಮ್ಮಿಕೊಂಡಿದ್ದು, ಅದರಲ್ಲಿ ಗೆದ್ದಂತಹ ಎಲ್ಲರಿಗೂ ಪ್ರಶಸ್ತಿ ಪ್ರದಾನ ಸಹ ಮಾಡಲು ಮುಂದಾಗಿದ್ದೇವೆ ಎಂದರು. ಈ ವೇಳೆ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆದವು. ಗಣ್ಯರಿಗೆ ಸನ್ಮಾನ ಸಹ ಮಾಡಲಾಯಿತು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1