ವಿಜಯಪುರ: ಇತ್ತೀಚಿಗೆ ಲಿಂಗೈಕ್ಯರಾದ ಸಿದ್ದೇಶ್ವರ ಸ್ವಾಮೀಜಿಗಳನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಾಣ ಮಾಡಿದ್ದ ಕಟ್ಟೆಯನ್ನು ಇಂದು ತೆರವುಗೊಳಿಸಲಾಗಿದೆ.
ಯಾವುದೇ ಮಠ, ಮಂದಿರ ತಮ್ಮ ಹೆಸರಲ್ಲಿ ನಿರ್ಮಾಣ ಮಾಡಬಾರದು ಎಂದು ಸಿದ್ದೇಶ್ವರ ಶ್ರೀಗಳು 2014ರಲ್ಲಿ ಉಯಿಲು ಬರೆದಿದ್ದರು.
ಅದರಂತೆ ಜನವರಿ 2ರಂದು ಲಿಂಗೈಕ್ಯರಾದ ಶ್ರೀಗಳ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗಿತ್ತು. ನಂತರ ಅವರ ಚಿತಾಭಸ್ಮವನ್ನು ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಕೂಡಮ ಸಂಗಮ ಗ್ರಾಮದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮುದ್ರದಲ್ಲಿ ವಿಸರ್ಜಿಸಲಾಗಿತ್ತು.
ಶ್ರೀಗಳ ಆಶಯದಂತೆ ಅವರನ್ನು ಅಂತ್ಯ ಸಂಸ್ಕಾರ ಮಾಡಲು ನಿರ್ಮಿಸಿದ್ದ ಕಟ್ಟೆಯೂ ತೆರವುಗೊಳಿಸಲಾಗಿದೆ. ನಿನ್ನೆ ತಡರಾತ್ರಿ ಗೋಕರ್ಣದಿಂದ ಬಂದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಕಟ್ಟೆಯನ್ನು ತೆರವು ಮಾಡಲಾಗಿದೆ.
ನಂತರ ಆಶ್ರಮದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡಿದ ಸ್ಥಳವನ್ನು ನೀರಿನಿಂದ ಶುಚಿಗೊಳಿಸುತ್ತಿದ್ದಾರೆ. ಇದರ ನಡುವೆಯೂ ಆಶ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಶ್ರಮ ಭೇಟಿ ನೀಡಿದವರು ಶ್ರೀಗಳನ್ನು ಅಂತ್ಯಸಂಸ್ಕಾರ ಮಾಡಿದ ಸ್ಥಳ ದರ್ಶನ ಮಾಡುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


