ಬೆಳಗಾವಿ : 2022-23ನೇ ಸಾಲಿಗೆ 21 ರಿಂದ 50 ವರ್ಷದೊಳಗಿನ ಅರ್ಹ ಪರಿಶಿಷ್ಟ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ, ಜಿಲ್ಲಾ ಕಚೇರಿ ವತಿಯಿಂದ ಅರ್ಹ ಫಲಾಪೇಕ್ಷಿಗಳಿಂದ ಸೇವಾಸಿಂಧು ಪೋರ್ಟಲ್ ಮೂಲಕ ವಿವಿಧ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆ ಘಟಕದಡಿ ವೆಚ್ಚ ಗರಿಷ್ಟ ರೂ.1 ಲಕ್ಷಗಳು ಇದರಲ್ಲಿ 50% ಅವಧಿ ಸಾಲ ಮತ್ತು 50% ಸಹಾಯಧನ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಐ.ಎಸ್.ಬಿ)-1: ಇ.ವಿ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್‍ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ ರೂ.50 ಸಾವಿರ ಸಹಾಯಧನ ಹಾಗೂ ರೂ. 20 ಸಾವಿರ ಸಾಲ ಮಂಜೂರು ಮಾಡಲಾಗುವುದು ಅದೇ ರೀತಿಯಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ಗರಿಷ್ಟ ರೂ. 3.50 ಲಕ್ಷ, ಸಹಾಯಧನ ಉಳಿದ ಮೊತ್ತ ಬ್ಯಾಂಕ್ ಸಾಲ ಮಂಜೂರು ಮಾಡಲಾಗುವುದು.
ಅರ್ಜಿ ಸಲ್ಲಿಸಬೇಕಾದ ದಾಖಲಾತಿಗಳು:
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ್, ವೋಟರ್ ಐಡಿ, ಬ್ಯಾಂಕ ಪಾಸ್‍ಬುಕ್ ಪ್ರತಿ, ವಾಹನವಾಗಿದ್ದಲ್ಲಿ ಡ್ರೈವಿಂಗ್ ಲೈಸೆನ್ಸ್ ಅಪ್‍ಲೋಡ್ ಮಾಡಿ, ವೆಬ್‍ಸೈಟ್ https://sevasindhu.karnataka.gov.in ವಿಳಾಸದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಜನವರಿ 16 2023ರವರೆಗೆ ವಿಸ್ತರಿಸಲಾಗಿದ್ದು, ಮೇಲ್ಕಂಡ ವೆಬ್‍ಸೈಟ್‍ಗಳಲ್ಲಿ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸುವುದು.
ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ ರೂಂ ನಂ: 221 2ನೇ ಮಹಡಿ ಸುವರ್ಣ ವಿಧಾನಸೌಧ ಹಲಗಾ ಬೆಳಗಾವಿ ಜಿಲ್ಲೆ ಹಾಗೂ ನಿಗಮದ ವೆಬ್‍ಸೈಟ್. https://kmvstdcl.karnataka.gov.in ಮತ್ತು ದೂರವಾಣಿ ಸಂಖ್ಯೆ: 0831-2451252 ಹಾಗೂ ಕಲ್ಯಾಣ ಮಿತ್ರ ಸಹಾಯವಾಣ -9482300400 ಇವರನ್ನು ಸಂಪರ್ಕಿಸಬಹುದಾಗಿರುತ್ತದೆ.
ಫಲಾನುಭವಿ ಅರ್ಹತೆಗಳು :
ಅರ್ಜಿದಾರರು ಪರಿಶಿಷ್ಟ ಪಂಗಡ ಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಸಂಬಂಧಿಸಿದ ವಾಹನ ಚಾಲನ ಪರವಾನಗಿ ಹೊಂದಿರಬೇಕು.
ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದಿರಬಾರದು. ಮತ್ತು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ರೂ. 1 ಲಕ್ಷ 50 ಸಾವಿರ ಮತ್ತು ನಗರ ಪ್ರದೇಶದಲ್ಲಿ ರೂ. 2 ಲಕ್ಷ ಗಳ ಮಿತಿಯಲ್ಲಿರಬೇಕು.
“ಗ್ರಾಮ ಒನ್” ಅಥವಾ “ಬೆಳಗಾವಿ ಒನ್” ಅಥವಾ “ಕರ್ನಾಟಕ ಒನ್” ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


