ಸ್ವತಂತ್ರ ಭಾರತದ ಮೊದಲ ವೈಯಕ್ತಿಕ ಕ್ರೀಡಾಪಟು ಖಾಶಾಬಾ ದಾದಾಸಾಹೇಬ್ ಜಾಧವ್ ಅವರ 97ನೇ ಜನ್ಮ ದಿನಾಚರಣೆಯಂದು ಗೂಗಲ್ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ.
ಖಾಶಾಬಾ ದಾದಾಸಾಹೇಬ್ ಜಾಧವ್ ಅವರು 1926, ಜನವರಿ 15ರಂದು ಭಾರತದ ಮಹಾರಾಷ್ಟ್ರ ರಾಜ್ಯದ ಗೋಲೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗ್ರಾಮದ ಅತ್ಯುತ್ತಮ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ಇವರಿಗೆ ತಂದೆಯೇ ಗುರುವಾಗಿದ್ದು, ತಂದೆಯಿಂದಲೇ ಕುಸ್ತಿ ತರಬೇತಿಯನ್ನು ಪಡೆದುಕೊಂಡರು.
ಪ್ರೌಢ ಶಾಲೆ ವಿಭಾಗದಲ್ಲೇ ಖಾಶಾಬಾ ದಾದಾಸಾಹೇಬ್ ಜಾಧವ್ ಅವರು ಅತ್ಯುತ್ತಮ ಕುಸ್ತಿಪಟುವಾಗಿ ಹೊರಹೊಮ್ಮಿದ್ದರು. ದೇಶದ ಅನೇಕ ರಾಜ್ಯಗಳಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಅವರು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು.
ಖಾಶಾಬಾ ದಾದಾಸಾಹೇಬ್ ಜಾಧವ್ ಅವರ ಕುಸ್ತಿ ಪ್ರತಿಭೆಯು ಕೊಲ್ಲಾಪುರದ ಮಹಾರಾಜರ ಗಮನ ಸೆಳೆಯಿತು ಅವರ ವಿಶೇಷ ಪ್ರೋತ್ಸಾಹವು ಖಾಶಾಬಾ ಅವರ ಕುಸ್ತಿ ಪ್ರತಿಭೆಗೆ ಶಕ್ತಿ ತುಂಬಿತು. ಲಂಡನ್ ನಲ್ಲಿ 1948ರಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಲ್ಲಾಪುರದ ಮಹಾರಾಜರೇ ಇವರಿಗೆ ಹಣ ನೀಡುತ್ತಾರೆ.
ಅಂತಿಮವಾಗಿ ಹೆಲ್ಸಿಂಕಿ ಒಲಿಪಿಂಕ್ಸ್ ನಲ್ಲಿ ಘಟಾನುಘಟಿ ಕುಸ್ತಿಪಟುಗಳ ಜೊತೆಗೆ ಸೆಣಸಿದ ಖಾಶಾಬಾ ದಾದಾಸಾಹೇಬ್ ಜಾಧವ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಸ್ವತಂತ್ರ ಭಾರತದ ಮೊದಲ ಕುಸ್ತಿಪಟುವಾಗಿ ಹೊರ ಹೊಮ್ಮಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1