ಅರ್ಬೋನಿ ಗೇಬ್ರಿಯಲ್ ಅವರು ವಿಶ್ವ ಸುಂದರಿ ವೇದಿಕೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವ ಮೊದಲ ಫಿಲಿಪಿನೋ-ಅಮೆರಿಕನ್ ಆಗಿದ್ದಾರೆ. ಸಾಮಾನ್ಯ ಹುಡುಗಿಯಾಗಿ ಹುಟ್ಟಿ ಬೆಳೆದ ಅರ್ಬೋನಿ ಕನಸು ನನಸಾಗಿಸಿದ್ದಾಳೆ.
ಅರ್ಬೋನಿ ಮಾರ್ಚ್ 20, 1994 ರಂದು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಜನಿಸಿದರು. ಅರ್ಬೋನಿಯ ತಂದೆ ಫಿಲಿಪೈನ್ಸ್‌ನಿಂದ ಕೇವಲ $20 ಅನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾಲೇಜು ವಿದ್ಯಾರ್ಥಿವೇತನದೊಂದಿಗೆ ಅಧ್ಯಯನ ಮಾಡಲು ಬಂದರು. ಅಲ್ಲಿ ಅವರು ಟೆಕ್ಸಾಸ್‌ನ ಹುಡುಗಿಯನ್ನು ಪ್ರೀತಿಸುತ್ತಿದ್ದರು.
ಫಿಲಿಪಿನೋ ಅಮೇರಿಕನ್, ಅರ್ಬೋನಿ 2018 ರಲ್ಲಿ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಫ್ಯಾಷನ್ ವಿನ್ಯಾಸದಲ್ಲಿ ಪದವಿ ಪಡೆದರು. ಅರ್ಬೋನಿ 2021 ರಲ್ಲಿ ಮಿಸ್ ಟೆಕ್ಸಾಸ್ USA ಆಗುವ ಮೊದಲ ಫಿಲಿಪಿನೋ-ಅಮೆರಿಕನ್ ಆಗುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ.
ಆ ದಿನ ಸೆಕೆಂಡ್ ಹ್ಯಾಂಡ್ ಅಂಗಡಿಯಲ್ಲಿ ಸಿಕ್ಕ ಕೋಟ್ ಅನ್ನು ಕತ್ತರಿಸಿ ಹೊಲಿಯುವ ಮೂಲಕ ಅರ್ಬೋನಿ ಸೌಂದರ್ಯ ಸ್ಪರ್ಧೆಯ ಉಡುಪನ್ನು ತಯಾರಿಸಿದರು. ಅರ್ಬೋನಿ ನಂತರ ಅಕ್ಟೋಬರ್ 2022 ರಲ್ಲಿ ಮಿಸ್ USA ಕಿರೀಟವನ್ನು ಪಡೆದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


