ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ಪಾವಗಡ ತಾಲೂಕಿನ ಟಿ.ಎನ್ ಪೇಟೆಯ ಬಳಿ ನಡೆದಿದೆ.
ಮೃತ ಬಾಲಕನನ್ನು ಚಳ್ಳಗೆರೆ ತಾಲೂಕಿನ ಗೌರಿಪುರದ ವರ್ಷಿತ್ (13) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಗೌರಿಪುರದ ಸುಧಾ (51), ಜಶ್ವಂತ್ (15), ನಾರಾಯಣಮ್ಮ (50), ನಾರಾಯಣಪ್ಪ (50), ತಾಲ್ಲೂಕಿನ ಜೆ. ಅಚ್ಚಮ್ಮನಹಳ್ಳಿ ಭರತ್ (16) ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ
ಸಂಕ್ರಾತಿ ಹಬ್ಬಕ್ಕೆ ಆಂಧ್ರದ ರೊದ್ದಂ ಮಂಡಲಂ ಶೇಷಾಪುರಕ್ಕೆ ತೆರಳಿ ಆಟೋದಲ್ಲಿ ವಾಪಸ್ಸಾಗುತಿದ್ದರು. ಟಿ ಎನ್ ಪುರದಲ್ಲಿ ಆಟೋ ನಿಲ್ಲಿಸಲಾಗಿದ್ದು ಇದೇ ಸಂಧರ್ಭದಲ್ಲಿ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ ಬಾಲಕನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಅಪಘಾತಕ್ಕೆ ಕಾರಣವಾದ ಕಾರು ಚಾಲಕ ಕಾರನ್ನು ಸ್ಧಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.ಪ್ರಕರಣ ದಾಖಲಿಸಿದ ಪೋಲಿಸರು ಸ್ಧಳ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy