ಕಾಳಿಂಗ ಸರ್ಪ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಈ ಹಾವನ್ನು ಕಂಡರೆ ಜನರು ಭಯಭೀತರಾಗುತ್ತಾರೆ. ಆದರೆ ಇಲ್ಲೊಬ್ಬ ಯುವಕ ಕಾಳಿಂಗ ಸರ್ಪದ ಜೊತೆಗೆಯೇ ಹುಡುಗಾಟ ಮಾಡಲು ಹೋಗಿದ್ದು, ಸ್ವಲ್ಪದರಲ್ಲೇ ಹಾವಿನ ಕಡಿತದಿಂದ ತಪ್ಪಿಸಿಕೊಂಡಿದ್ದಾನೆ.
ಯುವಕನೋರ್ವ ಕಾಳಿಂಗ ಸರ್ಪದ ಜೊತೆಗೆ ಹುಡುಗಾಟ ನಡೆಸುತ್ತಿರುವ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಹಾವಿನ ಬಾಲ ಹಿಡಿದು ಎಳೆಯುತ್ತಾ, ಸುತ್ತ ನೆರೆದಿರುವವರನ್ನು ರಂಜಿಸಲು ಯುವಕ ಮುಂದಾಗಿದ್ದಾನೆ. ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಪದೇ ಪದೇ ಬಾಲದಿಂದ ಎಳೆದು ಹಿಂಸಿಸಿದಾಗ ಆಕ್ರೋಶಗೊಂಡ ಹಾವು ಏಕಾಏಕಿ ತಿರುಗಿ ಯುವಕನ ಮೇಲೆ ದಾಳಿ ಮಾಡಲು ಹೆಡೆ ಎತ್ತಿನಿಂತಿದೆ. ಕೊನೆಯ ಕ್ಷಣದಲ್ಲಿ ಯುವಕ ಬಚಾವ್ ಆಗಿದ್ದು, ವಿಡಿಯೋ ಬೆಚ್ಚಿಬೀಳಿಸುವಂತಿದೆ.
ಹಾವುಗಳ ಜೊತೆಗೆ ಹುಡುಗಾಟ ಆಡಲು ಹೋಗಿ ಸಾಕಷ್ಟು ಜನರು ಪ್ರಾಣಕಳೆದುಕೊಂಡಿರುವ ಉದಾಹರಣೆ ಇದೆ. ಕಾಳಿಂಗ ಸರ್ಪ ಕಚ್ಚಿದರೆ ಏನಾಗುತ್ತದೆ ಅನ್ನೋದು ಗೊತ್ತಿದ್ದರೂ, ಹಾವಿನಿಂದಿಗೆ ಚೆಲ್ಲಾಟ ಆಡಿರುವ ಯುವಕನಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


