ಹೈದರಾಬಾದ್‌ನಲ್ಲಿ ನಾಯಿ ಬೆನ್ನಟ್ಟಿದ ಕಾರಣ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಜಿಗಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೊಹಮ್ಮದ್ ರಿಜ್ವಾನ್ ಅವರು ಆರ್ಡರ್ ನೀಡಲು ಬಂಜಾರಾ ಹಿಲ್ಸ್‌ನ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಸ್ವಿಗ್ಗಿಯ ಡೆಲಿವರಿ ಏಜೆಂಟ್ ಮೊಹಮ್ಮದ್ ರಿಜ್ವಾನ್ ಅವರಿಗೆ 23 ವರ್ಷ ವಯಸ್ಸಾಗಿತ್ತು.
ಫ್ಲಾಟ್‌ನ ಬಾಗಿಲು ತಟ್ಟಿದಾಗ, ಗ್ರಾಹಕರ ಮುದ್ದಿನ ಜರ್ಮನ್ ಶೆಫರ್ಡ್ ಬೊಗಳುತ್ತಾ ಮುಂದೆ ಬಂದಿತು. ಇದರಿಂದ ಹೆದರಿದ ರಿಜ್ವಾನ್ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಿಂದ ಜಿಗಿದಿದ್ದಾರೆ. ನಂತರ ರಿಜ್ವಾನ್ ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ನಿಮ್ಸ್) ಕರೆತರಲಾಯಿತು. ನಂತರ ಅವರು ಶನಿವಾರ ನಿಧನರಾದರು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


