nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025
    Facebook Twitter Instagram
    ಟ್ರೆಂಡಿಂಗ್
    • ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ
    • ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
    • ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ
    • ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ
    • ನವೆಂಬರ್ 19:  ಚಿಕ್ಕಪೇಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇಗುಲದಲ್ಲಿ ಲಕ್ಷ ದೀಪೋತ್ಸವ
    • ತುಮಕೂರು: ನಗರದ ವಿವಿಧೆಡೆ ಉಪಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅಧಿಕಾರಿಗಳು, ಅಂಗಡಿ ಮಾಲಿಕರಿಗೆ ತರಾಟೆ
    • ಗುಬ್ಬಿ: ತಾಲೂಕು ಯೋಜನಾ ಹುದ್ದೆಗೆ ಅರ್ಜಿ ಆಹ್ವಾನ
    • ನವೆಂಬರ್ 20: ಎಡೆಯೂರು ಲಕ್ಷದೀಪೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾರತದ ಜನಸಂಖ್ಯೆ ಚೀನ ದೇಶದ ಜನಸಂಖ್ಯೆಯನ್ನು ಮೀರಿದೆ
    ರಾಷ್ಟ್ರೀಯ ಸುದ್ದಿ January 18, 2023

    ಭಾರತದ ಜನಸಂಖ್ಯೆ ಚೀನ ದೇಶದ ಜನಸಂಖ್ಯೆಯನ್ನು ಮೀರಿದೆ

    By adminJanuary 18, 2023No Comments2 Mins Read
    janasanke

    ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೆನಿಸಿಕೊಂಡಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ರಾಷ್ಟ್ರವನ್ನು ಸುಸ್ಥಿರತೆಯ ಕಡೆಗೆ ನಡೆಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.

    ಜನಂಖ್ಯೆ ಹಾಗೂ ಜನಸಂಖ್ಯಾಶಾಸ್ತ್ರದ ಮೇಲೆ ಗಮನ ಕೇಂದ್ರೀಕರಿಸಿರುವ ವರ್ಲ್ಡ್ ಪಾಪ್ಯೂಲೇಷನ್ ರಿವ್ಯೂ ಅಂದಾಜಿನ ಪ್ರಕಾರ 2022ರ ಅಂತ್ಯಕ್ಕೆ ಭಾರತದ ಜನಸಂಖ್ಯೆ ೧.೪೧೭ ಬಿಲಿಯನ್ ಆಗಿತ್ತು. ಅಂದರೆ ಮಂಗಳವಾರದಂದು ಚೀನಾ ವರದಿ ಮಾಡಿರುವ ೧.೪೧೨ ಬಿಲಿಯನ್‌ ಗಿಂತ ೫ ದಶಲಕ್ಷ ಹೆಚ್ಚಾಗಿದೆ. ೧೯೬೦ರಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಇಳಿಕೆ ಕಂಡಿದೆ.


    Provided by
    Provided by

    ಮೂವತ್ತು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಜನಸಂಖ್ಯೆಯನ್ನು ಹೊಂದಿರುವ ಭಾರತ, ಮುಂಬರುವ ವರ್ಷಗಳಲ್ಲಿ ಆತೀ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಲಿದೆ.

    ಬಹುಪಾಲು ಜನಸಂಖ್ಯಾಶಾಸ್ತ್ರದ ಡಿವಿಡೆಂಡ್ ಅನ್ನು ಬಳಸಿಕೊಳ್ಳಲು ಪ್ರಧಾನ ಮೋದಿಯವರು ಪ್ರತಿ ವರ್ಷ ಉದ್ಯೋಗಕ್ಕೆ ಯೋಗ್ಯರಾಗುವ ಲಕ್ಷಾಂತರ ಜನರಿಗಾಗಿ ಉದ್ಯೋಗಿಗಳನ್ನು ಸೃಷ್ಟಿಸಬೇಕಾಗುತ್ತದೆ. ಮೇಲಾಗಿ ಭಾರತ ಕೃಷಿಯೇತರ ಉದ್ಯೋಗಗಳ ಕಡೆ ಹೆಚ್ಚು ಹೆಜ್ಜೆ ಹಾಕುತ್ತಿದೆ.

    ಭಾರತ ಈ ಮೈಲಿಗಲ್ಲನ್ನು ಈ ವರ್ಷ ತಲುಪುತ್ತದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿತ್ತು. ಡಬ್ಲ್ಯುಪಿಆರ್ ಪ್ರಕಾರ ಜನವರಿ ೧೮ರಂದಿಗೆ ಭಾರತದ ಜನಸಂಖ್ಯೆ 1.423 ಬಿಲಿಯನ್‌ ಗೆ ಏರಿಕೆಯಾಗಿದೆ.

    ಮ್ಯಾಕ್ರೊಟ್ರೆಂಡ್ಸ್ ಎಂಬ ಹೆಸರಿನ ಸಂಶೋಧನಾ ವೇದಿಕೆಯ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆ ಹಾಲಿ ೧.೪೨೮ ಬಿಲಿಯನ್ ಆಗಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಭಾರತ ಪ್ರತಿ ವರ್ಷಗಳಿಗೊಮ್ಮೆ ಪ್ರಕಟಿಸುವ ಜನಸಂಖ್ಯೆ ವಿವರಗಳನ್ನು ೨೦೨೧ರಲ್ಲಿ ಪ್ರಕಟಿಸಿಲ್ಲ.

    ಭಾರತದಲ್ಲಿ ಸಶಸ್ತ್ರ ಮೀಸಲು ಪಡೆಗಳ ಸೈನಿಕರ ಸೇವಾ ಅವಧಿ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುವ ಭಾರತದ ಕಳೆದ ವರ್ಷದ ಕ್ರಮವು, ಅವರಿಗಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ವೇತನ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸುವ ಹೆಚ್ಚಿನ ಹೊರೆಯನ್ನು ಆಡಳಿತದ ಮೇಲೆ ಹೇರಿದಂತಾಗಿದೆ. ೨೦೨೪ರ ಮೇ ತಿಂಗಳಲ್ಲಿ ಮೋದಿ ಚುನಾವಣೆ ಎದುರಿಸಲಿದ್ದು, ಹಾಲಿ ಆರ್ಥಿಕತೆಯಲ್ಲಿರುವ ಶೇ.೧೪ರಷ್ಟಿರುವ ತಯಾರಿಕಾ ಪ್ರಮಾಣವನ್ನು ಶೇ.೨೫ಕ್ಕೆ ಹೆಚ್ಚಿಸಲು ಯೋಜಿಸಿದ್ದಾರೆ.

    ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದ್ದರೂ ಹಾಗೂ ಸಾಂಕ್ರಾಮಿದಿಂದ ಬಹಳ ಚೇತರಿಸಿಕೊಂಡಿದ್ದರೂ ಸಹ 800 ದಶಲಕ್ಷ ಜನರು ಈಗಲೂ ಉಚಿತ ಪಡಿತರವನ್ನೇ ಆಧರಿಸಿದ್ದಾರೆ. ಇದು ಇಡೀ ವಿಶ್ವದಲ್ಲೇ ಅತೀ ದೊಡ್ಡ ಕಾರ್ಯಕ್ರಮವಾಗಿದೆ.

    ಪ್ರಸ್ತುತ ಭಾರತ ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಕ್ಷಮತೆಯನ್ನು ಹೊಂದಿದೆ. ಭಾರತ ಅಕ್ಕಿ, ಗೋಧಿ ಹಾಗೂ ಸಕ್ಕರೆಯ ಎರಡನೇ ಅತೀ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಜೊತೆಗೆ, ಅತೀ ದೊಡ್ಡ ಸಕ್ಕರೆ ಬಳಸುವ ರಾಷ್ಟ್ರವೂ ಆಗಿದೆ. ಅಡುಗೆ ತೈಲದಲ್ಲಿ ಅತೀ ದೊಡ್ಡ ಆಮದು ರಾಷ್ಟ್ರವಾಗಿದೆ.

    ಒಂದು ಮಾರುಕಟ್ಟೆಯಾಗಿ ಭಾರತ ವಿಶ್ವದ ಎರಡನೇ ಅತೀ ದೊಡ್ಡ ಚಿನ್ನ ಹಾಗೂ ಕಬ್ಬಿಣದ ಬೇಡಿಕೆ ಇರುವ ಹಾಗೂ ಕಚ್ಚಾ ತೈಲ ಆಮದಿನಲ್ಲಿ ಮೂರನೇ ಅತೀ ದೊಡ್ಡ ರಾಷ್ಟ್ರವಾಗಿದೆ. ಜೊತೆಗೆ ವಿಶ್ವದ ಮೂರನೇ ಅತೀ ದೊಡ್ಡ ದೇಶಿ ವಿಮಾನಯಾನ ಮಾರುಕಟ್ಟೆಯನ್ನು ಹೊಂದಿರುವ ರಾಷ್ಟ್ರವಾಗಿದೆ.

    ಭಾರತದ ಜನಸಂಖ್ಯೆ ಬೆಳವಣಿಗೆ ನಿಧಾನಗೊಂಡಿದ್ದರೂ ಸಹ, ೨೦೫೦ರವರೆಗೆ ಈ ಸಂಖ್ಯೆ ಇದೇ ಗತಿಯಲ್ಲಿ ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಡಬ್ಲ್ಯುಪಿಆರ್ ಅಂದಾಜಿಸಿದೆ.

    ಮತ್ತೊಂದೆಡೆ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಬ್ಯೂರೊ ಪ್ರಕಟಿಸಿರುವ ದತ್ತಾಂಶದ ಪ್ರಕಾರ ಚೀನಾ ಜನಸಂಖ್ಯೆ ಕಳೆದ ವರ್ಷದ ಹೋಲಿಕೆಯಲ್ಲಿ ೨೦೨೨ರಲ್ಲಿ ೮೫೦,೦೦೦ರಷ್ಟು ಕಡಿಮೆಯಾಗಿದೆ.

    ವಿಶ್ವ ಸಂಸ್ಥೆ ಅಂದಾಜಿನ ಪ್ರಕಾರ 2022 ರಿಂದ 2050ರ ನಡುವೆ ವಿಶ್ವದ ಜನಸಂಖ್ಯೆ ಹೆಚ್ಚಳದ ಪೈಕಿ ಅರ್ಧದಷ್ಟು ಜನಸಂಖ್ಯೆ ಹೆಚ್ಚಳ ಕಾಂಗೋ, ಈಜಿಪ್ಟ್, ಇಥಿಯೊಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪಿನ್ಸ್ ಹಾಗೂ ಟಾನ್‌ ಜೇನಿಯಾ ರಾಷ್ಟ್ರಗಳಲ್ಲಾಗಲಿದೆಯಂತೆ.

    ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ವಿಜೃಂಭಣೆಯಿಂದ ನೆರವೇರಿದ ಗೊರವನಹಳ್ಳಿ ರಥೋತ್ಸವ

    November 15, 2025

    ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ  ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ…

    ಕೊಳ್ಳುರ: ಮಕ್ಕಳ ದಿನಾಚರಣೆ, ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

    November 15, 2025

    ಬೀದರ್: ತೇಗಂಪೂರ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ

    November 15, 2025

    ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರಪ್ಪ ಕುಟುಂಬಕ್ಕೆ ಧರ್ಮಸ್ಥಳ ಸಂಘದಿಂದ ಧನ ಸಹಾಯ

    November 15, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.