ವೈ.ಎನ್.ಹೊಸಕೋಟೆ: ಫುಟ್ಬಾಲ್ ದೇಹಕ್ಕೆ ಉತ್ತಮ ಕಸರತ್ತು ನೀಡುವ ಪಂದ್ಯಾವಳಿಯಾಗಿದ್ದು, ಕ್ರೀಡಾಪಟುಗಳ ಆರೋಗ್ಯ ಉತ್ತಮವಾಗಿರಲು ಸಹಾಯಕವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ. ವೆಂಕಟೇಶ್ ತಿಳಿಸಿದ್ದಾರೆ.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ವೈ.ಎನ್.ಹೊಸಕೋಟೆ ಪುಟ್ ಬಾಲ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಪಟುಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇನ್ನಷ್ಟು ಅಭ್ಯಾಸ ಮಾಡಿಬೇಕು. ತಾಲ್ಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯಮಟ್ಟಕ್ಕೆ ಹೋಗಬೇಕು. ಮುಂದಿನ ದಿನಗಳಲ್ಲಿ ಇದೇ ರೀತಿ ಇನ್ನೂ ಹೆಚ್ಚಿನ ಸಹಕಾರ ನೀಡುತ್ತೇನೆ. ತಾಲ್ಲೂಕು ಮಟ್ಟದ ಫುಟ್ಬಾಲ್ ಕ್ರೀಡಾಕೂಟ ನಡೆಸಬೇಕೆಂದು ಆಟಗಾರರಿಗೆ ಮತ್ತು ಆಯೋಜಕರಿಗೆ ತಿಳಿಸಿದರು.
ಇಂದು ಫುಟ್ಬಾಲ್ ಕ್ರೀಡಾಕೂಟವನ್ನು ನೋಡಿ ತುಂಬಾ ಸಂತೋಷವಾಗಿದೆ. ತಂಡಗಳು ಒಂದಕ್ಕಿಂತ ಒಂದು ನಾ ಮುಂದು ತಾ ಮುಂದು ಎಂಬುವಂತೆ ರೋಚಕದಿಂದ ಆಟವನ್ನು ಹಾಡಿದ್ದೀರ. ಗ್ರಾಮೀಣ ಆಟಗಾರರು ತಮ್ಮ ಪ್ರತಿಭೆಯನ್ನು ಪಂದ್ಯಾವಳಿಯಲ್ಲಿ ತೋರಿಸಿ ಕೊಟ್ಟಿದ್ದೀರಾ. ನಿಮ್ಮ ಪ್ರತಿಭೆಯು ಮೆಚ್ಚುವಂತಹದ್ದು ಎಂದರು.
ಮುಖಂಡರಾದ ಟಿ.ಉಮೇಶ್ ಮಾತನಾಡಿ, ಗಡಿನಾಡು ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್ ಎರಡನೇ ಬಾರಿಗೆ ಕ್ರೀಡಾಕೂಟ ನಡೆಯುತ್ತಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಪುಟ್ ಬಾಲ್ ಕ್ರೀಡಾಕೂಟಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದರು.
ಕ್ರೀಡಾಕೂಟದಲ್ಲಿ ವೈಎಫ್ಸಿ ಡ್ರಾಗನಿಂಗ್ಸ್ ತಂಡ ಪ್ರಥಮ ಪ್ರಶಸ್ತಿ ಪಡೆದರೆ, ವೈಎಫ್ಸಿ ಬಿವಿನ್ಸ್ ತಂಡ 2ನೇ ಸ್ಥಾನ ಪಡೆಯಿತು. ಸೂರ್ಯವಂಶಿ ಎನ್.ಎ. ಪಂದ್ಯಾವಳಿಯ ಉತ್ತಮ ಆಟಗಾರನಾಗಿ, ಮನು ಟಾಪ್ ಗೋಲ್ ಸ್ಕೋರರ್ ಆಗಿ ಮತ್ತು ವೇಣು ಅತ್ಯುತ್ತಮ ಗೋಲ್ಕೀಪರ್ ಆಗಿ ಹೊರಹೊಮ್ಮಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಎನ್.ಆರ್.ಅಶ್ವತ್ ಕುಮಾರ್, ಎಲ್ಐಸಿ ಏಜೆಂಟ್ ಟಿ ಪಿ ನಾಗಜೋತಿ ಮುಖಂಡರಾದ ಶಂಕರ ರೆಡ್ಡಿ, ಶಿವಾನಂದ ಗುಪ್ತ, ಅಶೋಕ್, ಎಚ್.ಪಿ.ಕೃಷ್ಣಪ್ಪ, ಪಿ.ಸಿ.ಗೋಪಿ, ಕೇಶವಮೂರ್ತಿ, ಜಾಫರ್, ಶಿವಪ್ರಸಾದ್, ನಾಸಿರ್, ಶ್ರೀನಿವಾಸ್, ವೆಂಕಟೇಶ್, ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


