ಗುಜರಾತ್: ಕೋಟ್ಯಂತರ ರೂಪಾಯಿ ಮೌಲ್ಯದ ಸಂಪತ್ತನ್ನು ತ್ಯಜಿಸಿ ತಪಸ್ಸಿನ ಜೀವನ ನಡೆಸುವವರ ಕಥೆಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ಇದೀಗ 9 ವರ್ಷದ ಬಾಲಕಿಯೊಬ್ಬಳು ತನ್ನ ಆಸ್ತಿಯನ್ನು ಬಿಟ್ಟು ಸನ್ಯಾಸಿಯಾಗಲು ಸಿದ್ಧತೆ ನಡೆಸಿದ್ದಾಳೆ ಎಂದು ವರದಿಯಾಗಿದೆ.
ಗುಜರಾತ್‌ನ ಸೂರತ್‌ನ ವೆಸು ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಜ್ರದ ವ್ಯಾಪಾರಿ ಧನೇಶ್ ಮತ್ತು ಅಮಿ ಸಾಂಘ್ವಿ ಅವರ ಇಬ್ಬರು ಪುತ್ರಿಯರಲ್ಲಿ ದೇವಾಂಶಿ ಹಿರಿಯರು. ತಂಗಿಗೆ ನಾಲ್ಕು ವರ್ಷ. ದೇವಾಂಶಿ ಮತ್ತು ಆಕೆಯ ಸಹೋದರಿಯ ತಂದೆ ಧನೇಶ್ ಅವರು ಸೂರತ್‌ನಲ್ಲಿ ಮೂರು ದಶಕಗಳಷ್ಟು ಹಳೆಯದಾದ ವಜ್ರ ಪಾಲಿಶ್ ಮತ್ತು ರಫ್ತು ಮಾಡುವ ಸಾಂಘ್ವಿ ಮತ್ತು ಸನ್ಸ್ ಅನ್ನು ಹೊಂದಿದ್ದಾರೆ.
ದೇವಾಂಶಿ ಅವರು ಜೈನ ಸನ್ಯಾಸಿ ಆಚಾರ್ಯ ವಿಜಯ್ ಕೀರ್ತಿಶೂರಿ ಅವರ ಸಮ್ಮುಖದಲ್ಲಿ ಸನ್ಯಾಸಿನಿ ಜೀವನವನ್ನು ಕೈಗೊಂಡರು. ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ನೂರಾರು ಜನರು ಆಗಮಿಸಿದ್ದರು.
ದೇವಾಂಶಿ ಚಿಕ್ಕ ವಯಸ್ಸಿನಿಂದಲೇ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿದ ಮಗು ಎಂದು ಸಂಬಂಧಿಕರು ತಿಳಿಸಿದ್ದಾರೆ. ದೇವಾಂಶಿ ಅವರು ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಿರುವ ಸನ್ಯಾಸಿಗಳ ಗುಂಪಿನೊಂದಿಗೆ ಒಮ್ಮೆ 700 ಕಿಲೋಮೀಟರ್ ನಡೆದು ಸನ್ಯಾಸ ತೆಗೆದುಕೊಳ್ಳುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು ಎಂದು ಕುಟುಂಬ ಸ್ನೇಹಿತ ನೀರವ್ ಶಾ ಹೇಳಿದ್ದಾರೆ. ದೇವಾಂಶಿಗೆ ಐದು ಭಾಷೆಗಳು ಗೊತ್ತು ಮತ್ತು ಅನೇಕ ಪ್ರತಿಭೆಗಳಿವೆ ಎಂದು ಸಂಬಂಧಿಕರು ಹೇಳುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


