ಪಾಂಡವಪುರ: ಪುರಾತತ್ವ ಪರಂಪರೆಯ ಸಂಗ್ರಹಾಲಯ ಇಲಾಖೆ ವತಿಯಿಂದ 2 ಕೋಟಿ 60 ಲಕ್ಷದ ವೆಚ್ಚದಲ್ಲಿ ಮೇಲುಕೋಟೆ ಶ್ರೀ ಚೆಲುವ ನಾರಾಯಣ ಸ್ವಾಮಿಯ ದೇವಾಲಯದ ಅರಮನೆ ಮೈದಾನಕ್ಕೆ ಜೀರ್ಣೋದ್ಧಾರಕ್ಕಾಗಿ ಹಾಗೂ ಅಕ್ಕತಂಗಿ ಕೊಳಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಇಂದು ಭೂಮಿ ಪೂಜೆ ಕೈಕೊಂಡಿದ್ದೇನೆಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಮೇಲುಕೋಟೆಯಲ್ಲಿ ಭೂಮಿ ಪೂಜೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಇತಿಹಾಸ ಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಾಲಯ ಭವ್ಯ ಗಾಜಿನ ಅರಮನೆಯನ್ನು ಯಥಾಸ್ಥಿತಿಯಂತೆ ಅಭಿವೃದ್ಧಿಗೊಳಿಸಿ ಸುತ್ತಲೂ ಉದ್ಯನವನ ನಿರ್ಮಾಣಕ್ಕೆ ಹಾಗೂ ಅಕ್ಕತಂಗಿ ಕೊಳ ಸೇರಿ ಐದು ಕೊಳಗಳ ಅಭಿವೃದ್ಧಿ 2 ಕೋಟಿ 60 ಲಕ್ಷ ಅನುದಾನ ಬಿಡುಗಡೆ ಗೊಳಿಸಲಾಗಿದೆ. ಜತೆಗೆ ಸಣ್ಣ ನೀರಾವರಿ ಇಲಾಖೆಯಿಂದ 32 ಕೋಟಿ ವೆಚ್ಚದಲ್ಲಿ ಮೇಲುಕೋಟೆ ಎಲ್ಲಾ ಕಲ್ಯಾಣಿಗಳ ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ವೇಳೆ ಇಲಾಖೆ ಸಿ.ಟಿ.ಮಹೇಶ್, ಸತೀಶ್, ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ತಿರುಮಲೆ, ಮಾಜಿ ಅಧ್ಯಕ್ಷ ಅವ್ವಗಂಗಾಧರ್, ದೇವಾಲಯದ ಇಒ ಮಹೇಶ್ ಸದಸ್ಯರಾದ ಜಿ.ಕೆ.ಕುಮಾರ್ ಜೆಡಿಎಸ್ ಮುಖಂಡ ಬಾಲು ಪುಳಿಯೋಗರೆ ರವಿ ಸೇರಿದಂತೆ ಅನೇಕರು ಇದ್ದರು.
ವರದಿ: ಶ್ರೀನಿವಾಸ್, ಮಂಡ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


