ತುರುವೇಕೆರೆ: ಕಾರ್ಯಕ್ರಮದ ನಿಮಿತ್ತ ಹರಿಹರಕ್ಕೆ ತೆರಳಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ತುರುವೇಕೆರೆ ಮಾರ್ಗವಾಗಿ ತಡರಾತ್ರಿ ಸುಮಾರು 8:30 ಕ್ಕೆ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ.
ಈ ವೇಳೆ ಪಟ್ಟಣದ ಬಾಣಸಂದ್ರ ಸರ್ಕಲ್ ನಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಜಮೀರ್ ಅವರಿಗೆ ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಗೆ ಅವರು ಭೇಟಿ ನೀಡಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಮತ ಕೇಳುವಾಗ ಎಂದಾದರೂ ನಾವು ಇಂತಹ ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು ಮತ ಕೇಳಿದ್ದಾರಾ? ಖಂಡಿತ ಇಲ್ಲ , ಆದರೆ ನಾವು ಮತಗಳನ್ನು ಕೇಳಲು ಹೋದರೆ ನಮ್ಮ ಕಾಂಗ್ರೆಸ್ ಪಕ್ಷದಿಂದ ಏನು ಕಾರ್ಯಕ್ರಮ ಕೊಟ್ಟಿದ್ದೇವೆ ಅದನ್ನ ತೋರಿಸಿ ಮತ ಕೇಳುತ್ತೇವೆ ಎಂದರು.
ಬಿಜೆಪಿ ಪಕ್ಷ ಬರೀ ಹಿಂದೂ, ಮುಸಲ್ಮಾನ್, ಹಿಂದೂ, ಮುಸಲ್ಮಾನ್, ಎನ್ನುತ್ತಾರೆ, ಅವರಿಗೆ ಹಿಂದೂ ಬೇಕಾಗಿಲ್ಲ, ಮುಸಲ್ಮಾನರು ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಅಷ್ಟೇ, ಉದಾಹರಣೆಗೆ ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ ಮಾಡಲಿಕ್ಕೆ ಯಾರು ವಿರೋಧ ಮಾಡಿದ್ದು, ಇದೆ ಬಿಜೆಪಿ, ಆದರೆ ಇಂದು ಅದೇ ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿ ಮಾಡಲು ಹೇಳುತ್ತಿದ್ದಾರೆ, ಜೊತೆಗೆ ಪಕ್ಷದಲ್ಲಿ ನಳಿನ್ ಕುಮಾರ್ ಕಟೀಲು ಬಿಜೆಪಿ ಅಧ್ಯಕ್ಷ, ಅವರು ಹೇಳುತ್ತಾರೆ ಮೋರಿ, ನೀರು, ಚರಂಡಿ, ಬಿಡಿ, ಲವ್ ಜಿಹಾದ್ ಬಗ್ಗೆ ಚಿಂತನೆ ಮಾಡಿ ಎನ್ನುತ್ತಾರೆ, ಬಿಜೆಪಿ ಪಕ್ಷ ಯಾವತ್ತು ಅಭಿವೃದ್ಧಿ ಮಾಡಿ ಮತ ಕೇಳಿಲ್ಲ ಬಿಡಿ ಎಂದರು.
ಇನ್ನು ದಳ ಎಲ್ಲಿದೆ? ಜಾತ್ಯತೀತ ಜನತಾದಳದ ಬಗ್ಗೆ ಜನಗಳಿಗೆ ಜೆಡಿಎಸ್ ಪಕ್ಷ ಬಿ ಟೀಮ್ ಆಗಿಹೋಗಿದೆ. ತುರುವೇಕೆರೆಯಲ್ಲಿ ಏನಾದರೂ ಜೆಡಿಎಸ್ ಪಕ್ಷ ಗೆದ್ದರೆ ಅದು ಬಿಜೆಪಿ ಪಕ್ಷ ಗೆದ್ದ ಹಾಗೆ. ಜನ ಈ ಬಾರಿ ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ ಎಂದು ಹೇಳಿದರು.
ಮಹಿಳಾ ಕಾರ್ಯಕರ್ತೆಗೆ ಅವಮಾನ:
ಇನ್ನೂ ಶಾಸಕ ಜಮೀರ್ ಅಹ್ಮದ್ ತೆರಳಿದ ಮೇಲೆ ಕಾಂಗ್ರೆಸ್ ಕಾರ್ಯಕರ್ತೆ ಮಂಜುಳಾ ಎಂಬವರಿಗೆ ಪಕ್ಷದ ಕಾರ್ಯಕರ್ತನೋರ್ವ ಅವಮಾನ ಮಾಡಿದ್ದಾನೆ ಕಾರ್ಯಕರ್ತೆ ದೂರಿದ್ದಾರೆ.
ಇಲ್ಲಿ ಯಾಕೆ ಬರುತ್ತೀಯ, ಏನು ಕೆಲಸ, ಎಂದು ಕಾರ್ಯಕರ್ತ ಒಬ್ಬ ನನಗೆ ಹೇಳಿದ್ದಾನೆ ಎಂದು ಅವರು ಹೇಳಿದ್ದಾರೆ. ನಾವುಗಳು ಬರಬಾರದ, ಹಾಗಾದರೆ ಕಾಂಗ್ರೆಸ್ ಗೆಲ್ಲಬಾರದಾ? ಎಂದು ಕಾರ್ಯಕರ್ತೆ ನೋವಿನಿಂದ ಪ್ರಶ್ನಿಸಿದ್ದಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಹಿಳಾ ಕಾರ್ಯಕರ್ತೆಯರನ್ನು ಗಣನೆಗೆ ತೆಗೆದುಕೊಂಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ.
ಜಮೀರ್ ಅಹ್ಮದ್ ಆಗಸಿಸಿದ ಸಂದರ್ಭದಲ್ಲಿ ಸೈಯದ್ ನೂರುಲ್ಲಾ, ಜಫರ್, ನದೀಮ್, ಗುರುದತ್, ಮೇಲನಹಳ್ಳಿ ಮಂಜುನಾಥ್, ಇಂತಿಯಾಜ್ ಸಾಬ್, ಶಾಹಿದ್, ಹರ್ಷ, ಅರುಣ, ನಂಜುಂಡಪ್ಪ, ಫೈರೋಜ್, ನಿಸಾರ್ ಅಹಮದ್, ಸಮೀರ್ ಅಕಾಲಸಂದ್ರ, ಶಶಿ, ದಸ್ತು, ಅಹಮದ್ ಸಾಬ್, ನಟೇಶ್, ಜಾಫರ್, ಜಫ್ರೂಲಾ, ಅನೇಕ ಮುಸ್ಲಿಂ ಕಾರ್ಯಕರ್ತರು ಈ ವೇಳೆ ಜಮಾವಣೆಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


