ಬೆಳಗಾವಿ : ಇಲ್ಲಿನ ವಿದ್ಯಾಗಿರಿಯ ಅಜಮ್ ನಗರದ ಶ್ರವಣ ದೋಷವುಳ್ಳ ಮಕ್ಕಳ ಸರಕಾರಿ ಶಾಲೆಗೆ ಮೂವರು ಅರೆಕಾಲಿಕ ಪದವಿಪೂರ್ವ ಸಹಾಯಕ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶ್ರವಣ ದೋಷವುಳ್ಳ ಮಕ್ಕಳಿಗೆ ಪಾಠ ಮಾಡಲು ವಿಶೇಷ ಶಿಕ್ಷಣ ತರಬೇತಿ ಹೊಂದಿದವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೋಧನೆ ಮಾಡಲು ಮಾಸಿಕ ಗೌರವಧನ ಗರಿಷ್ಠ 5,000 ರೂಪಾಯಿ ನೀಡಲಾಗುವುದು.
ಆಸಕ್ತರು ಜನವರಿ 25, 2023 ರ ಒಳಗಾಗಿ “ಅಧೀಕ್ಷಕರು, ಕಿವುಡು ಮಕ್ಕಳ ಸರ್ಕಾರಿ ಶಾಲೆ ಅಜಮ ನಗರ ವಿದ್ಯಾಗಿರಿ ಬೆಳಗಾವಿ- 590010” ಇವರಿಗೆ ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0831-2472250 ಅಥವಾ 7676650942 ಗೆ ಸಂಪರ್ಕಿಸಬಹುದು ಎಂದು ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಪ್ರಭಾರಿ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


