ಬಾಲಕಿಯರ ಹಾಸ್ಟೆಲ್ ನಿಂದ ಮೊಬೈಲ್, ಲ್ಯಾಪ್ ಟಾಪ್ ಕದ್ದು ಓಡುವ ಭರದಲ್ಲಿ ಕಳ್ಳನೋರ್ವ ಬಾವಿಗೆ ಬಿದ್ದ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ.
ತೆಲಂಗಾಣದ ಹನಮಕೊಂಡ ಜಿಲ್ಲೆಯ ಹಾಸನಪರ್ತಿ ಮಂಡಲದ ಅನಂತಸಾಗರದಎಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ್ದ ಕಳ್ಳ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ಕದ್ದಿದ್ದಾನೆ. ಕದ್ದ ಬಳಿಕ ಹಾಸ್ಟೆಲ್ ನಿಂದ ಪರಾರಿಯಾಗುತ್ತಿರುವ ಗಡಿಬಿಡಿಯಲ್ಲಿ ಬಾವಿಯೊಳಗೆ ಬಿದ್ದಿದ್ದಾನೆ.
ಬೆಳಗ್ಗಿನವರೆಗೂ ಕಳ್ಳ ಬಾವಿಯೊಳಗೆಯೇ ಸಿಲುಕಿದ್ದಾನೆ. ಬಳಿಕ ಸಹಾಯಕ್ಕಾಗಿ ಕೂಗಿಕೊಂಡಾಗ ಬಾವಿಯಲ್ಲಿ ಕಳ್ಳ ಇರುವುದು ಗೊತ್ತಾಗಿದೆ. ತಕ್ಷಣವೇ ಸ್ಥಳೀಯರು ಹಗ್ಗದ ಸಹಾಯದಿಂದ ಕಳ್ಳನನ್ನು ಬಾವಿಯಿಂದ ಹೊರ ತೆಗೆದಿದ್ದಾರೆ.
ಹಾಸ್ಟೆಲ್ ನಿಂದ ಮೊಬೈಲ್, ಲ್ಯಾಪ್ ಟಾಪ್ ಕದ್ದು ಓಡುವಾಗ ಬಾವಿಗೆ ಬಿದ್ದಿರುವುದಾಗಿ ಕಳ್ಳ ಇದೇ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


