ವಿಜಯಪುರ ಜಿಲ್ಲೆಯ ಹೊಸಪೇಟೆಯಲ್ಲಿರುವ ವಿಶ್ವವಿಖ್ಯಾತ ಹಂಪಿಯ ಶ್ರೀ ಮಾತಂಗ ಮಹರ್ಷಿ ಆಶ್ರಮ ಇವರ ಆಶ್ರಯದಲ್ಲಿ ಫೆಬ್ರವರಿ 4 ಮತ್ತು 5ರಂದು ಸಂಗೀತ ಪಿತಾಮಹ ಶ್ರೀ ಮಾತಂಗ ಮಹರ್ಷಿಯವರ ಜಯಂತೋತ್ಸವವು ಮಾತಂಗ ಪರ್ವತದಲ್ಲಿ ನಡೆಯಲಿದೆ ಎಂದು ಮಾತಂಗ ಫೌಂಡೇಷನ್ ನ ಅಧ್ಯಕ್ಷ ಆರ್.ಲೋಕೇಶ್ ತಿಳಿಸಿದ್ದಾರೆ.
ಶ್ರೀ ಶ್ರೀ ಪೂರ್ಣಾನಂದ ಭಾರತೀ ಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಫೆಬ್ರವರಿ 4ರಂದು ಸಂಜೆ 5:30ಕ್ಕೆ ಪೂಜಾ ಕಾರ್ಯಕ್ರಮ, ಸಂಜೆ 6:30ಕ್ಕೆ ದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಫೆಬ್ರವರಿ 5ರಂದು ಬೆಳಗ್ಗೆ 6:30ಕ್ಕೆ ತುಂಗಾ ನದಿಯಲ್ಲಿ ಪವಿತ್ರ ಸ್ನಾನ, ತುಂಗಾ ನದಿಯ ತೀರದಿಂದ ಮಾತಂಗ ಪರ್ವತದ ಶ್ರೀ ಮಾತಂಗ ಮಹರ್ಷಿ ಆಶ್ರಮದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಅಂದು 8:30ಕ್ಕೆ ಧಾರ್ಮಿಕ ಸಭೆ, 9:30ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, 10:30ರಿಂದ ಭೂಮಿ ತಾಯಿ ಬಳಗ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ರಿಂದ ಪ್ರಸಿದ್ಧ ‘ಜೈ ಭೀಮ್ ತಮಟೆ ಕಲಾವಿದರು’ ಸಾಮೂಹಿಕ ತಮಟೆ ವಾದನ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


