ತುರುವೇಕೆರೆ: ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಫ್ ಪರೀಕ್ಷೆಯನ್ನು ಭಾನುವಾರ ತಾಲ್ಲೂಕಿನ ಪ್ರೌಢ ಶಾಲೆಯ ಮಕ್ಕಳು ಬರೆದರು.
ತಾಲ್ಲೂಕಿನ 17 ಸರ್ಕಾರಿ ಪ್ರೌಢ ಶಾಲೆ, ಮೂರು ಸರ್ಕಾರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠ ಶಾಲೆ, 26 ಅನುದಾನಿತ ಪ್ರೌಢ ಶಾಲೆಗಳ ಎಂಟನೇ ತರಗತಿಯ 728 ಮಕ್ಕಳು ಎನ್.ಎಂ.ಎಂ.ಎಸ್ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 711 ಮಕ್ಕಳು ಹಾಜರಾಗಿ 17 ಮಕ್ಕಳು ಗೈರಾಗಿದ್ದಾರೆ.
ಪಟ್ಟಣದ ಜಿಜೆಪಿ ಪ್ರೌಢ ಶಾಲೆ, ಜೆಪಿ ಆಂಗ್ಲ ಪ್ರೌಢ ಶಾಲೆ ಹಾಗೂ ಸರಸ್ವತಿಬಾಲಿಕಾ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಬೆಳಗ್ಗೆ 10:30ರಿಂದ ಮೊದಲ ಪತ್ರಿಕೆ ಜಿ.ಮ್ಯಾಟ್ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಎರಡನೇ ಪತ್ರಿಕೆ ಸ್ಯಾಟ್ ಅನ್ನು ಬರೆದಿದ್ದು, ಈ ಪರೀಕ್ಷೆಗಳ ಉಸ್ತುವಾರಿಯನ್ನು ಶಿಕ್ಷಣ ಸಂಯೋಜಕರಾದ ಶಿವಕುಮಾರ್ ವಹಿಸಿದ್ದರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ತಿಳಿಸಿದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy