ತುಮಕೂರು: ಕೊರಟಗೆರೆ ತಾಲೂಕಿನ ಹುಲೀಕುಂಟೆ ಗ್ರಾಮದ ಅಲೆಮಾರಿ ಜನರು ಕುಡಿಯಲು ನೀರಿಲ್ಲದೇ ಸಂಕಷ್ಟದಲ್ಲಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ನವರ ನಿರ್ಲಕ್ಷ್ಯದಿಂದ ಈ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ,ಅಮಲಾಪುರ ಮತ್ತು ಕೊರಟಗೆರೆ ತಾ ಹುಲೀಕುಂಟೆ ಗ್ರಾಮಗಳಲ್ಲಿನ ಅಲೆಮಾರಿ ಸಮುದಾಯಗಳಿಗೆ ನಿವೇಶನ ಮತ್ತು ವಸತಿಗೆ ಸಂಬಂದಿಸಿದಂತೆ ವಿಳಂಬವಾಗಿ ಬಾಕಿ ಉಳಿದಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಂಬಂದಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಳೆದೆರಡು ತಿಂಗಳುಗಳ ಹಿಂದೆ ನಿರ್ದೇಶನ ನೀಡಿದ್ದರು. ಸುಮಾರು 50 ಜನರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಅಂ.ಅ.ನಿಗಮದ ಜಿಲ್ಲಾ ವ್ಯವಸ್ಥಾಪಕರು,ತುಮಕೂರು ಹಾಗೂ ಕೊರಟಗೆರೆ ತಾ ಸಹಾಯಕ ನಿರ್ದೇಶಕರು ಮತ್ತು TDO ಮಹೇಂದ್ರ ಅವರೊಂದಿಗೆ ಸುದೀರ್ಘ ಮಾತುಕತೆಯ ಬಳಿಕ ಅಧಿಕಾರಿಗಳು ಸ್ಪಂದಿಸುವುದಾಗಿ ಸ್ಪಷ್ಟನೆ ನೀಡಿರುವುದ ಸಂತಸದ ವಿಚಾರವಾಗಿದೆ ಎಂದು ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
ಅದರಂತೆ ಕೊರಟಗೆರೆ TSW ರವರು ತುಂಬಾ ಮಂದಗತಿಯಲ್ಲಿದ್ದು ನಾಳೆಯಿಂದಲೇ ಈ ಜನರಿಗೆ ಕುಡಿಯುವ ನೀರೊದಗಿಸಲು ಮತ್ತು ಫಲಾನುಭವಿಗಳ ಪಟ್ಟಿಯಲ್ಲಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಅಮಲಾಪುರ ವಿಷಯದಲ್ಲಿ ತುಮಕೂರು ತಹಶೀಲ್ದಾರ್ ಮತ್ತು ಸರ್ವೆ ಇಲಾಖೆಯವರು ಎಚ್ಚೆತ್ತುಕೊಂಡು ಈ ಬಡ ಜನರ ಕೆಲಸ ಮಾಡಬೇಕಿದೆ ಎಂದು ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1