ತುರುವೇಕೆರೆ: ತಾಲೂಕಿನ ಮಾಯಸಂದ್ರದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಇಸ್ಮಾಯಿಲ್ ಪಾಷಾ ಅವರಿಗೆ ಸೇರಿದ ಸ್ಟಾರ್ ಚಿಕನ್ ಸೆಂಟರ್ ಸಂಪೂರ್ಣ ಸುಟ್ಟು ಕರಕಲಾಗಿ, ಮೂರು ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ.
ಈ ಅಂಗಡಿಯ ಅಕ್ಕಪಕ್ಕದಲ್ಲಿದ್ದ ತಿರುಮಲ ಚಿಕನ್ ಸೆಂಟರ್, ಕಾಲಭೈರವೇಶ್ವರ ಚಿಕನ್ ಸೆಂಟರ್, ಎರಡು ಅಂಗಡಿಗಳಿಗೂ ಬೆಂಕಿ ತಗುಲಿದ್ದು, ಒಟ್ಟಾರೆ ಮೂರು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.
ಸ್ಟಾರ್ ಚಿಕನ್ ಸೆಂಟರ್ ಅಂಗಡಿಯಲ್ಲಿದ್ದ ಸಿಲಿಂಡರ್, ಗ್ರೈಂಡರ್ ಮಿಷನ್, ಜನರೇಟರ್, ನೂರಾರು ಕೋಳಿಗಳು, ಸ್ಕೇಲ್ ಮಿಷಿನ್, ಒಟ್ಟಾರೆ ಅಂಗಡಿಯ ಒಳಗೆ ಇದ್ದ ಎಲ್ಲಾ ಉಪಕರಣಗಳು ಸುಟ್ಟು ಕರಕಲಾಗಿದೆ.
ಇನ್ನು ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಳಗಿನ ಜಾವ ಅಂಗಡಿಯ ಬಳಿ ಬಂದಿದ್ದ ವೇಳೆ ಬೆಂಕಿ ಉರಿಯುತ್ತಿದ್ದನ್ನು ಕಂಡು ತಕ್ಷಣ ಅಂಗಡಿಯ ಮಾಲೀಕನಿಗೆ ವಿಷಯ ಮುಟ್ಟಿಸಿದ್ದಾರೆ, ಎಚ್ಚೆತ್ತುಕೊಂಡ ಅಂಗಡಿಯ ಮಾಲೀಕ ತಾಲೂಕಿನ ಅಗ್ನಿ ಶಾಮಕ ಕಚೇರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಸುಮಾರು ಎಂಟು ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕೆಲಸವನ್ನು ಮಾಡಿದ್ದಾರೆ.
ಸ್ಟಾರ್ ಚಿಕನ್ ಸೆಂಟರ್ ನಲ್ಲಿ ಇದ್ದಂತಹ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದು, ಭಾರೀ ನಷ್ಟ ಆಗಿದೆ. ಇನ್ನು ಅಂಗಡಿ ಮಾಲೀಕರಿಗಂತು ವ್ಯಾಪಾರ ಮಾಡಲು ಆಗದೇ ಬಂಡವಾಳವು ಇಲ್ಲದೆ, ಬಿಸಿ ತುಪ್ಪ ಬಾಯಲ್ಲಿಟ್ಟಂತಾಗಿದೆ, ತಕ್ಷಣ ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು, ಸ್ಥಳ ಪರಿಶೀಲನೆ ಮಾಡಿ, ನಷ್ಟ ಆಗಿರುವ ಮಾಲೀಕರಿಗೆ ಸರ್ಕಾರದಿಂದ ಆಗುವ ಪ್ರಯೋಜನ ಕೊಡಿಸಿ, ಅವರುಗಳ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದಾಸಿರ್ (ಮಣೆ ಚಂಡೂರ್ ಪಂಚಾಯಿತಿ) ಅಲೀಮ್ , ಮುಬಾರಕ್, ಇಸ್ಮಾಯಿಲ್, ಅಕ್ಕ ಪಕ್ಕದ ಅಂಗಡಿ ಮಾಲೀಕರುಗಳಾದ ಯೋಗೀಶ್ ,ಮೋಹನ್ ಕುಮಾರ್ ಸೇರಿದಂತೆ ಇನ್ನೂ ಅನೇಕ ಸಾರ್ವಜನಿಕರು ಅಂಗಡಿಯ ಬಳಿ ಜಮಾವಣೆಗೊಂಡಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1