ತಿರುವನಂತಪುರಂ: ಮದ್ಯ ಸೇವಿಸಿ ಬಂದು ಹೆತ್ತ ತಾಯಿಗೆ ಥಳಿಸುತ್ತಿದ್ದ ಪಾಪಿ ಮಗನನ್ನು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಾಯಂನ ಮೀನಾಡೋಮ್ ನಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಪುತ್ರ ಕೊಚುಮೊನ್ ಕುಡಿದು ಬಂದು ತಾಯಿಗೆ ಥಳಿಸುತ್ತಿರುವ ದೃಶ್ಯವನ್ನು ಆತನ ಪತ್ನಿಯೇ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಿಗೆ ಸಿಗುತ್ತಿದ್ದಂತೆಯೇ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕೊಚುಮೊನ್ ನನ್ನು ಬಂಧಿಸಲು ತೆರಳಿದ ವೇಳೆಯೂ ಆತ ಸ್ಥಳೀಯ ಬಾರ್ ನಲ್ಲಿ ಮದ್ಯ ಸೇವಿಸುತ್ತಿದ್ದ.’
ವಯಸ್ಸಾದ ತಾಯಿಗೆ ಹೊಡೆಯದಂತೆ ನೆರೆಹೊರೆಯವರು ಸಾಕಷ್ಟು ಸಲ ಆತನಿಗೆ ಬುದ್ಧಿ ಹೇಳಿದ್ದರು. ಆದರೆ, ಆತ ಯಾರ ಮಾತುಗಳನ್ನು ಕೇಳುತ್ತಿರಲಿಲ್ಲ, ಅತ್ತೆ ಪ್ರತೀ ದಿನ ಪೆಟ್ಟು ತಿನ್ನುವುದನ್ನು ನೋಡಲಾಗದೇ ಸೊಸೆ, ಈತ ಹಲ್ಲೆ ನಡೆಸುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಳೆ. ಇದೀಗ ಕೊಚುಮೊನ್ ಜೈಲುಪಾಲಾಗಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


