ಹಾಸನ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭವಾನಿ ರೇವಣ್ಣರಿಗೆ ಈಗಾಗಲೇ ಟಿಕೆಟ್ ನೀಡಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಿಕೆಟ್ ಆಫರ್ ನೀಡುವ ಮೂಲಕ ಜೆಡಿಎಸ್ ಗೆ ಟಾಂಗ್ ನೀಡಿದ್ದಾರೆ.
ಹಾಸನದಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಣೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಿ.ಟಿ ರವಿ, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನ ಗಮನಿಸಿದ್ದೇನೆ . ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಯನ್ನೂ ಗಮನಿಸಿದ್ದೇನೆ ನಾನು ಮನೆಯ ಗಲಾಟೆ ಹೆಚ್ಚಿಸುವುದಕ್ಕೆ ಬಯಸುವುದಿಲ್ಲ. ಭವಾನಿಯವರು ಹೊಳೇನರಸೀಪುರದಿಂದ ಅಭ್ಯರ್ಥಿಯಾಗಲಿ. ಹೊಳೇನರಸಿಪುರದಿಂದ ಬಿಜೆಪಿ ಟಿಕೆಟ್ ಕೊಡ್ತೀವಿ. ಭವಾನಿಯವರಿಗಿಂತ ಉತ್ತಮ ಕ್ಯಾಂಡಿಡೇಟ್ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ ಎಂದರು.
ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿರುವ ಭವಾನಿಯವರು ಹೊಳೆನರಸೀಪುರದಿಂದ ಅಭ್ಯರ್ಥಿಯಾಗಲಿ. ಬಿಜೆಪಿಗೆ ಬರುವಂತೆ ಸಿಟಿ ರವಿ ಆಫರ್ ಕೊಟ್ಟರು. ಹೊಳೇನರಸಿಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್.ಡಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


