ತುರುವೇಕೆರೆ: ತಾಲೂಕು ಆಡಳಿತದ ವತಿಯಿಂದ 74ನೇ ಗಣರಾಜ್ಯೋತ್ಸವವನ್ನೂ ಪಟ್ಟಣದ ಕೆ.ಹಿರಣ್ಣಯ್ಯ ಬಯಲುರಂಗ ಮಂದಿರದ ಆವರಣದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ವಿಜಯ ಕರ್ನಾಟಕ ಪತ್ರಿಕೆಯ ತಾಲೂಕು ವರದಿಗಾರರಾದ ಕೆ.ಆರ್ .ಸ್ವಾಮಿ ಮಾಯಸಂದ್ರ, ಬೆಂಗಳೂರು ಟೈಮ್ಸ್ ಪತ್ರಿಕೆಯ ಸಂಪಾದಕರು ಮತ್ತು ವರದಿಗಾರರು ಆದ ಟಿ.ವಿ.ವೆಂಕಟರಾಮ್, ಈ ಸಂಜೆ ಪತ್ರಿಕೆಯ ವರದಿಗಾರರಾದ ಮನೋಹರ್, ಜನತಾ 24×7 ನ್ಯೂಸ್ ಚಾನೆಲ್ ನ ತುರುವೇಕೆರೆ ತಾಲೂಕು ವರದಿಗಾರರಾದ ಕೆ.ಎ.ಮಂಜುನಾಥ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಎಂಎಂಎಲ್ ನ ಅಧ್ಯಕ್ಷರಾದ ಮಸಾಲ ಜಯರಾಮ್, ತುರುವೇಕೆರೆ ತಾಲ್ಲೂಕು ದಂಡಾಧಿಕಾರಿ ವೈ.ಎಮ್ .ರೇಣು ಕುಮಾರ್ , ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಮ್ ರಾಜು ಮತ್ತಿತರರು ಇದ್ದರು.
ವರದಿ: ಸುರೇಶ್ ಬಾಬು, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy