ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬೆಳಗಾವಿಯಿಂದ ಅದ್ದೂರಿ ಚಾಲನೆ ದೊರೆತಿದ್ದು ಚೆನ್ನಮ್ಮನ ಕಿತ್ತೂರಿನಲ್ಲಿ ಅಮಿತ್ ಶಾ ಭಾಷಣ ಮಾಡಿದರು.
ದೇವಿ ಯಲ್ಲಮ್ಮ ರವರಿಗೆ ನಮಿಸಿ ಭಾಷಣ ಶುರು ಮಾಡಿದ ಅವರು ಬೊಮ್ಮಾಯಿ ಜನ್ಮ ದಿನದ ಶುಭಾಶಯ ತಿಳಿಸಿದರು. ರಾಣಿ ಚೆನ್ನಮ್ಮ ಮತ್ತು ಸಿದ್ದೇಶ್ವರ್ ಸ್ವಾಮೀಜಿ,ವೀರ ಸಾವರ್ಕರ್,ಆಲೂರ್ ವೆಂಕಟ ರಾವರವನ್ನು ನೆನೆಯುತ್ತ ಮುಂದಿನ 5ವರ್ಷ ಕರ್ನಾಟಕದಲ್ಲಿ ಬಿಜೆಪಿಯೇ ಆಡಳಿತದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮತ್ತು ಕಾಗ್ರೇಸ್ ಮೇಲೆ ಹರಿಹಾಯ್ದಶಾ, ಕರ್ನಾಟಕದ ವಿಕಾಸ್ ಬಿಜೆಪಿ ಯಿಂದ ಮಾತ್ರ ಸಾಧ್ಯ ಕರೆಂಟ್, ಶೌಚಾಲಯ, ಗ್ಯಾಸ್, ಅಯುಷ್ಮಾನ್ ಭಾರತ ನೀಡಿದ್ದೆ ಬಿಜೆಪಿ. 5ಕಿಲೋ ಫ್ರೀ ಅಕ್ಕಿ ನೀಡಿದ್ದೆ ಬಿಜೆಪಿ,
2 ಕೋವಿಡ್ ವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡಿದ್ದೆ ಬಿಜೆಪಿ, ರಾಮ್ ನಾಥ್ ಕೊವಿಂದ್ ಮತ್ತು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರ ಪತಿ ಮಾಡಿದ್ದೆ ಬಿಜೆಪಿ ಎಂದು ಅಭಿವೃದ್ಧಿ ಯೋಜನೆಗಳ ಕುರಿತು ಭಾಷಣ ಮಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


