ಪಾವಗಡ: ರಾಜಕೀಯ ಪಕ್ಷಗಳು ಸಾಲ ಮನ್ನಾ ಎಂಬ ಮಂತ್ರದ ಪ್ರಣಾಳಿಕೆಗಳನ್ನು ಬಳಸುತ್ತಿರುವುದರಿಂದ ಬ್ಯಾಂಕುಗಳು ಹೆಚ್ಚು ನಷ್ಟ ಅನುಭವಿಸುತ್ತಿವೆ ಎಂದು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬ್ಯಾಂಕುಗಳಲ್ಲಿ ಸಾರ್ವಜನಿಕರು ಪ್ರತಿಯೊಬ್ಬರು ಪಡೆದಂತಹ ಸಾಲ ಕಾಲಕಾಲಕ್ಕೆ ಮರುಪಾವತಿಸಿದರೆ ಯಾವುದೇ ಬ್ಯಾಂಕುಗಳು ನಷ್ಟ ಅನುಭವಿಸಲು ಸಾಧ್ಯವಿಲ್ಲ, ಇಲ್ಲದಿದ್ದರೆ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ಸಂಬಳ ಕೊಡೋದು ಕಷ್ಟಕರವಾಗಿದೆ. ಇತ್ತೀಚೆಗೆ ಸಾರ್ವಜನಿಕರು ಬ್ಯಾಂಕುಗಳು ಠೇವಣಿ ಇಡುವ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಈಗಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮಳಿಗೆ ಕಟ್ಟಡ ಬಹಳ ಹಳೆಯದಾಗಿದ್ದು, ಈ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ ವಾಣಿಜ್ಯ ಮಳಿಗೆಗಳು ರೀತಿಯಲ್ಲಿ ಅಡ ನಿರ್ಮಾಣ ಮಾಡಬೇಕು. ರೈತರಿಗೆ ಹೆಚ್ಚಿನ ಬ್ಯಾಂಕಿನಲ್ಲಿ ಆದ್ಯತೆ ನೀಡಿ ಸವಲಂಬನೆ ಜೀವನಕ್ಕೆ ಆದ್ಯತೆ ನೀಡುವ ಕೆಲಸ ಬ್ಯಾಂಕಿನವರು ಮಾಡಬೇಕಾಗಿದೆ ಎಂದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಅಶ್ವಥ್ ನಾರಾಯಣ ಮಾತನಾಡಿ ನನ್ನ ಅವಧಿಯಲ್ಲಿ ಎಲ್ಲಾ ಪಕ್ಷದ ಮುಖಂಡರಿಗೆ ಒಗ್ಗೂಡಿಸಿ ಅಭಿವೃದ್ಧಿ ದೆಸೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.
ದೇಶದ ಬೆನ್ನೆಲುಬು ರೈತ ಕೃಷಿ ಚಟುವಟಿಕೆಗಳಿಗೆ ನಮ್ಮ ಬ್ಯಾಂಕಿನ ಸವಲತ್ತುಗಳನ್ನು ಬಳಸಿಕೊಂಡು ಅತಿ ಹೆಚ್ಚು ಕೃಷಿ ಏತರ ಚಟುವಟಿಕೆಗಳಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು. ನನ್ನ ಅವಧಿಯಲ್ಲಿ ನೀಡಿದಂತಹ ಸಾಲ ಶೇಕಡವಾರು 95% ಎಷ್ಟು ಮರುಪಾವತಿ ಬ್ಯಾಂಕಿಗೆ ಆಗಿದೆ. ಈಗ ನನ್ನ ಅವಧಿಯಲ್ಲಿ ಶಾಸಕರ ನೇತೃತ್ವದಲ್ಲಿ 15 ಲಕ್ಷದ ಮೂರು ಮಳಿಗೆಗಳಿಗೆ ಶಂಕುಸ್ಥಾಪನೆ ಸಹ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕರಾದ ತಾಳೆಮರದ ಹಳ್ಳಿ ನರಸಿಂಹಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಕೀಲ ನಾಗೇಂದ್ರಪ್ಪ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಚೆನ್ನಮಲ್ಲಪ್ಪ, ಪಿ ಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಕೆಂಚಗನಹಳ್ಳಿ ಗೋವಿಂದಪ್ಪ, ಮಾಜಿ ಅಧ್ಯಕ್ಷರಾದಂತಹ ಶೇಷಗಿರಿ, ಪುರಸಭೆಯ ಮಾಜಿ ಅಧ್ಯಕ್ಷರಾದ ಎ.ಶಂಕರ್ ವೇಲುರಾಜು, ಪುರಸಭೆಯ ಸದಸ್ಯರಾದ ಪಿ.ರಾಜೇಶ್, ವೆಂಕಟ್ರಣಪ್ಪ, ವಿಶ್ವನಾಥ್
ತೆಂಗಿನಕಾಯಿ ರವಿ, ಕಾಂಗ್ರೆಸ್ ಮುಖಂಡರು ಪ್ರಮೋದ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿ ಇನ್ನು ಮುಂತಾದವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy