ಪಾವಗಡ: ಮಂಗಳವಾರ ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳ ಕಚೇರಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ವೆಂಕಟರಮಣಪ್ಪ ಮಕ್ಕಳು ಶೈಕ್ಷಣಿಕವಾಗಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಹೆಚ್ಚಿನ ಜ್ಞಾನವನ್ನು ತುಂಬಿ ಅವರನ್ನು ಉದಯೋನ್ಮುಖ ವಿದ್ಯಾರ್ಥಿಗಳಾಗಿ ತಯಾರಿಸುವಂತಹ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ದೇಶವನ್ನು ಕಟ್ಟುವುದರಲ್ಲಿ ಮತ್ತು ದೇಶಕ್ಕೆ ಉತ್ತಮ ಸಮಾಜ ನೀಡುವಲ್ಲಿ ನಿಮ್ಮ ಪಾತ್ರ ಗಣನೀಯ ಎಂದು ಇದ ವೇಳೆ ಶಿಕ್ಷಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು,ಇದೆ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ.ವೆಂಕಟೇಶ್ ಮಾತಾಡಿ, ಸಮಾಜಕ್ಕೆ ಶಿಕ್ಷಕರು ಮತ್ತು ವೈದ್ಯರ ವೃತ್ತಿ ಗಣನೀಯವಾದ ವೃತ್ತಿಯಾಗಿದ್ದು, ಶಿಕ್ಷಕರು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮತ್ತು ಅಧಿಕಾರಿಗಳನ್ನು ತಯಾರಿಸುವಂತಹ ಕಾರ್ಖಾನೆ ಇದ್ದಂತೆ ನಿಮ್ಮ ವೃತ್ತಿ ಎಂದು ಇದೆ ವೇಳೆ ಅವರು ಕೊಂಡಾಡಿದ್ದಾರೆ, ಶಿಕ್ಷಕರಾದ ನೀವು ತಯಾರಿಸುವಂತಹ ಮುತ್ತುಗಳು ಈಗ ಪ್ರಪಂಚಾದ್ಯಂತ ನಾವು ಕಾಣಬಹುದು ಎಂದು ಇದೆ ವೇಳೆ ಅವರು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್ ಮಾತನಾಡಿ ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಬರುತ್ತಿದ್ದು, ತಮ್ಮ ತಮ್ಮ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಪರೀಕ್ಷೆಗೆ ಸಿದ್ಧತೆಗೊಳಿಸುವಂತಹ ಜವಾಬ್ದಾರಿ ನಿಮ್ಮ ಮೇಲಿರುತ್ತದೆ ಎಂದು ಅವರ ಇದೇ ವೇಳೆ ನೆರೆದಿದ್ದ ಶಿಕ್ಷಕರಿಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರೊಫೆಸರ್ ಶಶಿಕುಮಾರ್ ಮಾತನಾಡಿದರು. ಇದೇ ಕಾರ್ಯದಲ್ಲಿ ಪಾವಗಡ ತಾಲೂಕಿನ ಶಾಸಕರಾದ ವೆಂಕಟರಮಣಪ್ಪ ಅವರಿಗೆ ಶಾಲಾ ಶಿಕ್ಷಕರ ವತಿಯಿಂದ ಸನ್ಮಾನವನ್ನು ಮಾಡಯಿತು.
ಪಾವಗಡ ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಪವನ್ ಕುಮಾರ್ ರೆಡ್ಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶಂಕ್ರಪ್ಪ, ತಾಲೂಕು ದೈಹಿಕ ಪರಿವೀಕ್ಷಕರಾದ ಚಿದಾನಂದ್ ಸ್ವಾಮಿ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದಂತಹ ಧನಂಜಯ, ಶ್ರೀನಿವಾಸಲು, ನಾರಾಯಣಪ್ಪ ಐ.ಎ., ಯತಿಕುಮಾರ್, ಜಿ.ವೆಂಕಟೇಶಲು, ECOಗಳಾದ ಶಿವಮೂರ್ತಿ ನಾಯಕ್, ರಂಗನಾಥ್, ಎಚ್.ಪಿ., ಶಿವಕುಮಾರ್, ವೇಣುಗೋಪಾಲ್ ರೆಡ್ಡಿ, ಚಂದ್ರಶೇಖರ್ BRPಗಳಾದ ದೇವರಾಜು, ಗೀತಾರಾಣಿ, ರಂಗಸ್ವಾಮಿ ಕೆ.ಎಸ್., ಸಂಪನ್ಮೂಲ ವ್ಯಕ್ತಿ ಸಾಧಿಕ್ ಉಲ್ಲಾ ಶರೀಫ್, ವಿ.ಎಚ್.ಪಾಳ್ಯ ಪಾಪಣ್ಣ ಸೇರಿದಂತೆ ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy