ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು ಈ ಕುರಿತು ಹೆಚ್.ಡಿ .ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಜನರನ್ನುಮರುಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಕೇಂದ್ರ ಬಜೆಟ್ ನಿಂದ ರಾಜ್ಯದಲ್ಲಿ ಮುಂದೆ ಬರುವ ಸರ್ಕಾರದ ತೀರ್ಮಾನ ಮಾಡುತ್ತದೆ. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಆಗುತ್ತದೆ. ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ ಎಂದರು.
ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ..? ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ, ಭದ್ರಾ , ಮಹಾದಾಯಿ , ಕೃಷ್ಣ ಯೋಜನೆಗೆ ಏನೇ ಘೋಷಣೆ ಮಾಡಿದರೂ ಮೊದಲೇ ಘೋಷಣೆ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ ಎಂದು ಟೀಕಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


