ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಮದುವೆ ಬಳಿಕ ಆಸ್ತಿ ಹಂಚಿಕೆ ಮಾಡುವೆ ಎಂದ ಅಣ್ಣನನ್ನು ತಮ್ಮ ಕೊಲೆ ಮಾಡಿದ ಘಟನೆ ನಡೆದಿದೆ.
ಯಮನೂರಪ್ಪ ಬಸಪ್ಪ ಕಡಿವಾಲರ್ (35) ಕೊಲೆಯಾದ ವ್ಯಕ್ತಿಯಾಗಿದ್ದು, ಮಲ್ಲಪ್ಪ ಕಡಿವಾಲರ್ (30) ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಪಟ್ಟಣಚಿಂತಿ ಗ್ರಾಮದ ಬಸಪ್ಪ ಕಡಿವಾಲರ್ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು, ಕೊಲೆ ಆರೋಪಿ ಮಲ್ಲಪ್ಪ ಕೊನೆ ಮಗ. ಈತನನ್ನು ಹೊರತು ಪಡಿಸಿ ಮೂವರ ಮದುವೆಯಾಗಿತ್ತು. ಇವರ ಪಿತ್ರಾರ್ಜಿತವಾಗಿ ಬಂದ 16 ಎಕರೆ ಆಸ್ತಿಯಲ್ಲಿ ತನಗೆ ಸೇರಬೇಕಾದ ಆಸ್ತಿ ಹಂಚಿಕೆಗೆ ಅಣ್ಣ ಯಮನೂರಪ್ಪನನ್ನು ಒತ್ತಾಯಿಸುತ್ತಿದ್ದ. ಆದರೆ ಯಮನೂರಪ್ಪ ಮಲ್ಲಪ್ಪನಿಗೆ ಮದುವೆಯಾಗಲಿ ನಂತರ ಆಸ್ತಿ ಹಂಚಿಕೆ ಮಾಡಿಕೊಳ್ಳೋಣ ಎಂದು ದಿನದೂಡುತ್ತಿದ್ದ. ಇತ್ತ ಮದುವೆ ಇಲ್ಲದೇ ಮಲ್ಲಪ್ಪ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ.
ಅಣ್ಣನೊಂದಿಗೆ ಮಲ್ಲಪ್ಪ ಏಕಾಏಕಿ ಜಗಳಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸ್ನಾನದ ಕೊಠಡಿಯಲ್ಲಿ ಕಟ್ಟಿಗೆಯಿಂದ ಅಣ್ಣನನ್ನು ಭೀಕರವಾಗಿ ಹೊಡೆದು ಬಳಿಕ ಚಾಕುವಿನಿಂದ ಭೀಕರವಾಗಿ ಮನಬಂದಂತೆ ಇರಿದು ಕೊಂದಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


