ಸರಗೂರು: ಮುಂಬರುವ ಜಿಲ್ಲಾ ಪಂಚಾಯತಿ ಟಿಕೆಟ್ ಆಕಾಂಕ್ಷಿ ಯುವ ಮುಖಂಡ ಹಂಚೀಪುರ ಸುರೇಶ್ ತಮ್ಮ 40 ನೇ ವರ್ಷದ ಜನ್ಮದಿನವನ್ನು ಕಾರ್ಯಕರ್ತರು ಹಾಗೂ ಕುಟುಂಬಸ್ಥರ ಜೊತೆಗೆ ಆಚರಿಸಿಕೊಂಡರು.
ಸರಗೂರು ತಾಲ್ಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ವೇಳೆಯಲ್ಲಿ ಟೀ ಸೋಮೇಶ್ ಸ್ನೇಹ ಬಳಗ ಹಾಗೂ ಅಭಿಮಾನಿಗಳು ವತಿಯಿಂದ ಹಮ್ಮಿಕೊಳ್ಳಲಾದ ಸರಳ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಹೋಗಿ ಹಂಚೀಪುರ ಸುರೇಶ್ ಹೆಸರಿನಲ್ಲಿ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್, ಸ್ನೇಹಿತರಿಗೂ ಮತ್ತು ಅಭಿಮಾನಿಗಳಿಗೂ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಗೋಪಾಲ್, ಸಿದ್ದರಾಜು, ಮಹೇಶ್, ಶಿವರಾಜು, ಸುಂದರ್, ಜಯಕುಮಾರ್, ಶ್ರೀನಿವಾಸ, ಯಜಮಾನರು ವೆಂಕಟೇಶ್, ಹೆಜ್ಜೂರಪ್ರಸಾದ್, ಚೆನ್ನಪ್ಪ, ಬೇಕರಿ ಗಿರೀಶ್, ಸುರೇಶ್ ಪತ್ನಿ ಸುಮಿತ್ರಾ ಮತ್ತು ಮಗಳು ಸುಕೃತಾ ಭಾಗಿಯಾಗಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


