ಅಮೂಲ್ನ ಬೆಲೆ ಏರಿಸುವುದರ ಮೂಲಕ ಬಳಕೆದಾರರಿಗೆ ಮತ್ತೆ ಶಾಕ್ ನೀಡಿದೆ. ನಿರಂತರ ಎರಡು ತಿಂಗಳಿನಿಂದ ಬೆಲೆ ಏರಿಕೆಯಾಗುತ್ತಿದ್ದು ಅಮೂಲ್ ತಾಜಾ ಹಾಲು ಬೆಲೆ ಒಂದು ಲೀಟರ್ಗೆ 54 ರೂ ಗೆ ಹೆಚ್ಚಾಗಿದೆ. ಹಸು ಹಾಲಿನ ಬೆಲೆ 56 ರೂ, ಎಮ್ಮೆ ಹಾಲಿನ ಬೆಲೆ 70 ರೂಪಾಯಿಗೆ ಹೆಚ್ಚಾಗಿದೆ. ಇನ್ನು ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ಗೆ 66 ರೂ ಆಗಿದೆ
ಹಾಲಿನ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಅಮೂಲ್ ತನ್ನ ಬೆಲೆ ಏರಿಕೆ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದು ಅಮೂಲ್ ತಾಜಾ ಒಂದು ಲೀಟರ್: 54 ರೂ, ಅಮೂಲ್ ಗೋಲ್ಡ್ ಒಂದು ಲೀಟರ್: 66 ರೂ, ಅಮೂಲ್ ಹಸು ಹಾಲು ಒಂದು ಲೀಟರ್: 56 ರೂ ಹಾಗೂ ಅಮೂಲ್ ಎಮ್ಮೆ ಹಾಲು: 70 ರೂ ಸಧ್ಯದ ದರವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


