ಡ್ರಗ್ಸ್‌ನೊಂದಿಗೆ ಮತ್ತೆ ಭಾರತದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಗಳನ್ನು ಬಿಎಸ್ ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ರಾಜಸ್ಥಾನದ ಅಂತರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದ್ದು, 6 ಕೆಜಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಡ್ರೋನ್ ನ್ನು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 4 ರ ಶನಿವಾರ ರಾತ್ರಿ ರಾಜಸ್ಥಾನದ ಶ್ರೀಗಂಗಾನಗರ ವಲಯದ ಶ್ರೀಕರನ್‌ಪುರ ಪ್ರದೇಶಕ್ಕೆ ಡ್ರೋನ್ ಆಗಮಿಸಿದೆ. ಪಾಕಿಸ್ತಾನದ ಡ್ರೋನ್ ಮತ್ತು 6 ಕೆಜಿ ತೂಕದ ಆರು ಪ್ಯಾಕೆಟ್ ಮಾದಕ ವಸ್ತುಗಳನ್ನು ಸ್ಥಳೀಯ ಪೊಲೀಸರ ಜಂಟಿ ತಂಡವು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
ಶುಕ್ರವಾರ ಪಂಜಾಬ್ ನಲ್ಲಿ ಐದು ಕಿಲೋಗಳಷ್ಟು ಮಾದಕ ದ್ರವ್ಯಗಳನ್ನು ಹೊತ್ತೊಯ್ಯುತ್ತಿದ್ದ ಇದೇ ರೀತಿಯ ಡ್ರೋನ್ ಅನ್ನು ಗಡಿ ಪಡೆ ಹೊಡೆದುರುಳಿಸಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


