ಸರಗೂರು: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮು ನೇಮಕಗೊಂಡಿದ್ದಾರೆ.
ಶನಿವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾಗಿ ಸದಸ್ಯರಾದ ಎಸ್.ಎಲ್.ರಾಜಣ್ಣ, ಉಮಾರಾಮು, ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು.
ಈ ಪೈಕಿ ಶಿವಕುಮಾರ್ ಉಮಾರಾಮು ಅವರಿಗೆ ಬೆಂಬಲ ಸೂಚಿಸಿದರು. ಹೀಗಾಗಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮು ಆಯ್ಕೆಗೊಂಡರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಕಾಂಗ್ರೆಸ್ ಪಕ್ಷದ ಪಪಂ ಸದಸ್ಯರು ಚಲುವಕೃಷ್ಣ ಶ್ರೀನಿವಾಸ ಇಬ್ಬರು ಸದಸ್ಯರು ಬಿಜೆಪಿ ಪಕ್ಷದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ಎಂಬುವರಿಗೆ ಸೂಚಕ ಹಾಗೂ ಅನುಮೋಧಕವಾಗಿ ಬಿಜೆಪಿ ಪಕ್ಷದ ಶಿವಕುಮಾರ್ ರವರಿಗೆ ಬೆಂಬಲ ಸೂಚಿಸಿದರು.
ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ಸಾಮಾನ್ಯ ಸಭೆಗೆ ಸಂಸದರು, ಶಾಸಕರಿಗೆ ಏಳು ದಿನಗಳೊಳಗೆ ನೋಟೀಸ್ ನೀಡಬೇಕು. ಆದರೆ, ಅಧಿಕಾರಿಗಳು ಜ.31ರಂದು ನೋಟೀಸ್ ನೀಡಿದ್ದಾರೆ. ಸಂಸದರು, ಶಾಸಕರ ಗೈರು ಹಾಜರಿಯಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯ್ಕೆ ಅಸಿಂಧುವಾಗಿದೆ. ಮುಂದೆ ನ್ಯಾಯಯುತವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾಶ್ರೀನಾಥ್, ಉಪಾಧ್ಯಕ್ಷ ವಿನಯ್, ಸದಸ್ಯರಾದ ಎಸ್.ಎಲ್.ರಾಜಣ್ಣ, ಹೇಮಾವತಿ ರಮೇಶ್, ಚೈತ್ರಸ್ವಾಮಿ, ಸಣ್ಣತಾಯಮ್ಮ, ನೂರಾಳಸ್ವಾಮಿ, ಶಿವಕುಮಾರ್, ದಿವ್ಯಾನವೀನ್, ಶ್ರೀನಿವಾಸ್, ಚಲುವಕೃಷ್ಣ, ನಾಮನಿರ್ದೇಶನ ಸದಸ್ಯರಾದ ಎಸ್.ನಾರಾಯಣ್, ಎನ್.ಎಸ್.ಪ್ರತಾಪ್, ರಂಗಸ್ವಾಮಿ ಹಾಜರಿದ್ದರು.
ಬಿಜೆಪಿಯಿಂದ ಸಂಭ್ರಮಾಚರಣೆ:
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮ ರಾಮಚಂದ್ರ ಆಯ್ಕೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಕಚೇರಿ ಆವರಣದ ಮುಂಭಾಗದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ಟೌನ್ ಅಧ್ಯಕ್ಷ ನಾಗರಾಜರಾಮ್,ಜಿಲ್ಲಾ ಬಿಜೆಪಿ ಕಾರಿಕಾರಣಿ ಸುನಂದರಾಜು, ಶ್ರೀರಾಮಲು, ರಾಜೇಶ್, ಅನಿಲ್, ಪೈಂಟ್‌ನಾಗರಾಜು, ಶ್ರೀಕಂಠ ನವೀನ್ ಕುಮಾರ್, ಸೇರಿದಂತೆ ಇನ್ನಿತರರು ಹಾಜರಿದ್ದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿರುವುದರಿಂದ ಕಾಂಗ್ರೆಸ್ ಪಕ್ಷದ ಪಪಂ ಸದಸ್ಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆ ಬೆಂಬಲ ನೀಡುತ್ತಾನೆ ಎಂದು ಭರವಸೆ ನೀಡಿದ್ದು. ಅದರೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದು ಅದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದರು ಎಂದು ಪ.ಪಂ. ಸದಸ್ಯ ಎಸ್.ಎಲ್ ರಾಜಣ್ಣ ಬೇಸರ ವ್ಯಕ್ತಪಡಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


