ಶಾಸಕರ ನಿಧಿ ಹಾಗೂ ನಗರಾಭಿವೃದ್ಧಿ ನಿಧಿ ಒಟ್ಟು 10 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ರೂಪಕಗಳ ಹಾಗೂ ಧ್ವನಿವರ್ಧಕ ಹಾಗೂ ಬೆಳಕಿನ ರೂಪಕ 40 ನಿಮಿಷಗಳ ಸಮಯದ ರೂಪಕ ಇದು ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಮೂಡಿಬರಲಿದೆ.
ಸ್ಮಾರಕ ಫೆಬ್ರುವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ದಿನದಂದು ಸ್ಮಾರಕ ಉದ್ಘಾಟನೆಗೊಳ್ಳಲಿದೆ ಅದರ ಅಂಗವಾಗಿ ಇಂದು ಶಾಸಕ ಅಭಯ ಪಾಟೀಲ್ ಕಾಮಗಾರಿಯನ್ನು ಪರಿಶೀಲಿಸಿ ಫೆಬ್ರವರಿ 19ರ ಒಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ. ಈ ಸ್ಮಾರಕ ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರವೇಶ ನೀಡಲಾಗುವುದು ಆದರೆ ಯಾವ ರೀತಿ ಶಾಲಾ ಮಕ್ಕಳಿಗೆ ಶಿವಪ್ರೇಮಿಗಳಿಗೆ ಇದನ್ನು ನೋಡಲು ಅವಕಾಶ ಮಾಡಿಕೊಡುವುದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು.
ಬೆಳಗಾವಿ ದಕ್ಷಿಣ ಭಾಗದಲ್ಲಿರುವ ಶಿವಾಜಿ ಗಾರ್ಡನ್ ಹತ್ತಿರ ಈ ಸ್ಮಾರಕ ನಿರ್ಮಾಣಗೊಂಡಿದ್ದು ಈ ಸ್ಮಾರಕ ಉದ್ಘಾಟನೆಯ ಸಲುವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಯೋಗಿ ಆದಿತ್ಯನಾಥ್ ಹಾಗೂ ಆಸ್ಸಾಂ ಮುಖ್ಯಮಂತ್ರಿ ಅವರನ್ನುಆಹ್ವಾನಿಸಲಾಗಿದೆ. ಆದರೆ ಇನ್ನೂ ದಿನಾಂಕ ನಿಗದಿಯಗದೇ ಇರುವುದರಿಂದ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಶಿವ ಚರಿತ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಇತಿಹಾಸಕಾರರನ್ನು ಆಹ್ವಾನಿಸಲಾಗಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


