ತುರುವೇಕೆರೆ: ರಾಜ್ಯ ಸರ್ಕಾರ ಕೆಲವು ಕಂದಾಯ ಗ್ರಾಮಗಳನ್ನು ಒಂದು ವರ್ಷದ ಹಿಂದೆ ಘೋಷಣೆ ಮಾಡಿತ್ತು. ಆದರೆ ಅದಕ್ಕೆ ಚಾಲನೆ ಕೊಟ್ಟಿರಲಿಲ್ಲ. ಈಗ ಚುನಾವಣಾ ಹತ್ತಿರದಲ್ಲಿ ರಾಜಕೀಯ ಮೈಲೇಜ್ ಪಡೆಯಲು ಹಾಗೂ ರಾಜಕೀಯ ಲಾಭ ಪಡೆಯಲು ಶಾಸಕರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕೀಯ ಮೈಲೇಜ್ ಪಡೆಯಲು ನಮ್ಮ ಮಧ್ಯೆ ಹೊಡೆದಾಟ ಮಾಡಿಸುತ್ತಿದ್ದಾರೆ. ಇದು ಓಟ್ ಬ್ಯಾಂಕ್ ಗೋಸ್ಕರ ಮಾಡಿದ ಕುತಂತ್ರವಾಗಿದ್ದು, ಹಿಂದೆ ಯಾರಿಗೆ ಚೀಟಿ ಕೊಟ್ಟಿದ್ದರು, ಅದೇ ರೀತಿ ಹಿಂದೆ ಇದ್ದಂತ ಸ್ವರೂಪದಲ್ಲೇ ಮುಂದುವರೆಸ ಬೇಕೆಂದು ಆಗ್ರಹಪಡಿಸಿ ಹಿಂದೆ ಕೊಟ್ಟಿದ್ದಂತಹ ಹಕ್ಕು ಪತ್ರಗಳನ್ನು ಬದಲಾಯಿಸಬಾರದು, ಪಕ್ಷ ಭೇದವಿಲ್ಲದೆ ಹಂಚಿಕೆ ಮಾಡಬೇಕು ಎಂದು ತಹಶೀಲ್ದಾರರ ಹತ್ತಿರ ಮಾತನಾಡಿದ್ದೇನೆ ಚುನಾವಣಾ ಮುಗಿಯುವವರೆಗೂ ಈ ಪ್ರಕ್ರಿಯೆಯನ್ನು ನಿಲ್ಲಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಪಂಚಾಯಿತಿವಾರು ಮಾಹಿತಿಯನ್ನು ತೆಗೆದುಕೊಂಡು ಅಧ್ಯಕ್ಷರು ಮತ್ತು ಪಿ.ಡಿ.ಓ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಧಕ್ಕೆಯಾಗದಂತೆ ಮಾಡಬೇಕು. ಕೆಲವರು ಇಂತಹ ಗ್ರಾಮಗಳಲ್ಲಿ ಮನೆ ಕಟ್ಟಿಕೊಂಡು ಹೊರಗೆ ವ್ಯಾಪಾರಕ್ಕೆ ಹೋಗಿರುತ್ತಾರೆ. ಮನೆ ಯಾರ ಹೆಸರಲ್ಲಿದೆ ಅವರಿಗೆ ಮಾಡಿಕೊಡಿ ತಹಶೀಲ್ದಾರ್ ರವರು ಲಕ್ಕಿರಾಂಪುರ ತೆರಳಿ ಅಳತೆ ಮಾಡುತ್ತೇವೆಂದು ಅಲ್ಲಿಯ ನಿವಾಸಿಗಳಿಗೆ ಬೆದರಿಸಿದ್ದಾರೆ. ಇದು ಆಗಬಾರ, ಯಥಾಸ್ಥಿತಿಯನ್ನು ಕಾಪಾಡಿಕೊಂಡು ಮುಂದುವರೆಸಿ ಕೊಂಡು ಹೋಗಬೇಕು ಚುನಾವಣಾ ಸಂದರ್ಭದಲ್ಲಿ ರಾಜಕೀಯವಾದಂತ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿ ಮಣಿಚಂಡೂರಿಗೆ ಕಿತ್ತೂರುರಾಣಿಚನ್ನಮ್ಮ ಶಾಲೆಯನ್ನು ಮಂಜೂರು ಮಾಡಿಸಿದ್ದೆ ಅದರಂತೆ ವಿಠಲಾಪುರಕ್ಕೂಸಹ ಶಾಲೆ ಮಂಜೂರಾಗಿತ್ತು. ಅಲ್ಲಿ ಶಾಸಕರು ಅವರ ಬೆಂಬಲಿಗನನ್ನು ಉಳಿಸಲು ಶಾಲೆಯ ಕಟ್ಟಡವನ್ನು ಮಣಿಚಂಡೂರಿನಲ್ಲಿ ಕಟ್ಟಿಸಿದ್ದಾರೆ. ಇವರ ಏಕಪಕ್ಷೀಯ ನಿರ್ಧಾರವಾಗಿದೆ. ಹಿಂದೆ ಮಂಜೂರದಂತಹ ಜಾಗಗಳಲ್ಲಿ ಶಾಲೆ ಗಳನ್ನು ಪ್ರಾರಂಭಿಸಿ ಎಂದು ಶಾಸಕರನ್ನು ಒತ್ತಾಯಿಸಿದರು.
ದಲಿತ ಮುಖಂಡ ಮುನಿಯುರು ರಂಗಸ್ವಾಮಿ ಮಾತನಾಡಿ, ಅಂಬೇಡ್ಕರ್ ವಸತಿ ಶಾಲೆಯನ್ನು ತಾಲ್ಲೂಕಿಗೆ ಮಾಜಿ ಶಾಸಕರು ಹಿಂದೆ ಮುಂಜೂರು ಮಾಡಿಸಿದ್ದರು. ಅದಕ್ಕೆ ಸಂಬಂಧಪಟ್ಟ ಜಮೀನನ್ನುಅಮ್ಮಸಂದ್ರದಲ್ಲಿ ಸಹ ಮಂಜೂರು ಮಾಡಿಸಿದ್ದಾರೆ. ಅಂಬೇಡ್ಕರ್ ಶಾಲೆಯ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೆ, ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂಥ ಶಾಲೆಯ ಕಟ್ಟಡವನ್ನು ಪ್ರಾರಂಭಿಸದೆ ವಿಳಂಬ ನೀತಿ ಅನುಸರಿಸುತ್ತಿರುವುದು ಅಂಬೇಡ್ಕರ್ ಆಶಯಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಅಧ್ಯಕ್ಷ ಸ್ವಾಮಿ. ವೆಂಕಟಾಪುರ ಯೋಗೀಶ್. ಬಸವರಾಜು ಇದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy