ಬೆಳಗಾವಿ: ಭಾರಿ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಪೂರ್ಣಗೊಂಡಿದ್ದು ಎರಡು ಸ್ಥಾನಗಳು ಬಿಜೆಪಿ ತೆಕ್ಕೆ ಸೇರಿವೆ. ಮಹಾಪೌರ ಸ್ಥಾನಕ್ಕೆ ಶೋಭಾ ಸುಮ್ನಾಚೆ ಅವಿರೋಧವಾಗಿ ಆಯ್ಕೆಗೊಂಡರೆ, ರೇಷ್ಮಾ ಪಾಟೀಲ್ ಉಪ ಮೇಯರ್ ಆಗಿ ಚುನಾಯಿತಗೊಂಡಿದ್ದಾರೆ.
ದಕ್ಷಿಣ ಮತ್ತು ಉತ್ತರ ಮತಕ್ಷೇತ್ರದ ಶಾಸಕರಗಳ ಮೇಲೆ ವಿರೋಧಪಕ್ಷಗಳು ಮಹಾನಗರ ಪಾಲಿಕೆ ಚುನಾವಣೆಯು ಮುಕ್ತಾಯಗೊಂಡ ನಂತರದಿಂದ ಆರೋಪಗಳು ಟೀಕೆಗಳು ಇಬ್ಬರು ಶಾಸಕರುಗಳ ಮೇಲೆ ಸಾಮಾನ್ಯವಾಗಿತ್ತು. ಒಂದು ಹಂತದಲ್ಲಿ ಭಾರತೀಯ ಜನತಾ ಪಕ್ಷದ ಮಹಾನಗರ ಸದಸ್ಯರುಗಳು ಅಸಮಾಧಾನಗೊಂಡು ಆಪರೇಷನ್ ಹಸ್ತ ಅಥವಾ ಬೇರೆಯಾಗುವ ಚರ್ಚೆಯು ಕೂಡ ಗುಸು-ಗುಸು ಆಗಿ ನಡೆದಿತ್ತು.
ಎಲ್ಲವನ್ನೂ ಬಹು ಜಾನ್ಮೆಯಿಂದ ಮತ್ತು ತಾಳ್ಮೆಯಿಂದ ನಿಭಾಯಿಸಿದ ಇಬ್ಬರು ಶಾಸಕರುಗಳು ಬೆಳಗಾವಿ ಮಹಾನಗರ ಪಾಲಿಕೆಯನ್ನು ತನ್ನ ರಾಜಕೀಯ ಇಚ್ಛಾಶಕ್ತಿಯಿಂದ ಹಿಡಿದು ಇಟ್ಟಿದ್ದರು. ಇದರಲ್ಲಿ ಪ್ರಮುಖ ಪಾತ್ರ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇಲ್ಲಿ ಪ್ರಮುಖ ಪತ್ರ ವಹಿಸಿದ್ದರು.
ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಲಿದೆ ಸಂಪೂರ್ಣ ಬಹುಮತ ಇದ್ದರು ಅಭಿವೃದ್ಧಿ ಪರವಾಗಿ ನಿಲ್ಲುವಂತ ಮತ್ತು ಬೆಳಗಾವಿ ಅನೇಕ ಸಮಸ್ಯೆಗಳ ಗಮನ ಹರಿಸಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಮೊದಲನೆಯ ಸವಾಲ್ ಕನ್ನಡ ಹಾಗೂ ಮರಾಠಿ ಭಾಷಕರು ಇವರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಸವಾಲ್ ಇದಾಗಿದೆ. ಯಾಕೆಂದರೆ ಇಲ್ಲಿ ಗಡಿ ವಿಷಯದಿಂದಾಗಿ ಪದೇ ಪದೇ ಮಹಾನಗರ ಪಾಲಿಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪಾಲವಾಗುತ್ತಿತ್ತು ಈಗಿರುವ ಪರಿಸ್ಥಿತಿ ಹಾಗಿಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನೀಡುತ್ತಿದ್ದ ಮತಗಳು ಬಹುಪಾಲ ಭಾರತೀಯ ಜನತಾ ಪಕ್ಷದ ಜೊತೆಯಾಗಿವೆ. ಅದೇ ಕಾರಣದಿಂದಾಗಿ ಭಾರತೀಯ ಜನತಾ ಪಕ್ಷ ತನ್ನ ಜಾಣ ನಡಿಗೆಯನ್ನು ಈ ಚುನಾವಣೆಯಲ್ಲಿ ಪ್ರದರ್ಶಿಸಿದೆ. ಈಗ ಮುಂಬರುವ ಎರಡು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಎಲ್ಲಾ ಬೆಳವಣಿಗೆ ಭಾರತೀಯ ಜನತಾ ಪಕ್ಷ ಯಾವ ರೀತಿ ಲಾಭ ಪಡೆದುಕೊಳ್ಳಲಿದೆ ಅನ್ನೋದು ಕಾದು ನೋಡಬೇಕಾಗಿದೆ.
ಈ ಕಡೆ ಕಾಂಗ್ರೆಸ್ 11 ಸದಸ್ಯರುಗಳನ್ನು ಹೊಂದಿದ್ದು ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಬಹಿಷ್ಕಾರ ಹಾಕಿ ಅಲ್ಲದೆ ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯರುಗಳಾಗಲಿ ಶಾಸಕರಗಳಾಗಲಿ ಈ ಕಡೆ ತಲೆ ಕೂಡ ಹಾಕಲಿಲ್ಲ ಸಭೆಯಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂದು ಮಹಾಪೌರರಿಗೆ ಕಿವಿಮಾತು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


