ಕಲಬುರ್ಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಉತ್ತಿರ್ಣವಾಗಲು ಕಾಲಿಗೆ ಗೋದಿ ಹಿಟ್ಟು ಮೆತ್ತಿಕೊಂಡು ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1619 ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿಗೆ 38 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಮೊದಲ ಹಂತದ ದೇಹದಾರ್ಡ್ಯ ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕ ಕಂ ನಿರ್ವಾಹಕನಾಗಲು 55 ಕೆಜಿ ತೂಕ, 163 ಸೆಂಟಿ ಮೀಟರ್ ಎತ್ತರವಿರಬೇಕು. ಆದ್ರೆ, ಟೆಸ್ಟ್ಗೆ ಬಂದಿದ್ದ ನಾಲ್ವರು ಖದೀಮರು ತೂಕ ಹೆಚ್ಚಳಕ್ಕಾಗಿ ಒಳ ಉಡುಪಿನಲ್ಲಿ ಕೆಜಿ ಕಲ್ಲು, ಕಾಲುಗಳಿಗೆ, ಸೊಂಟಕ್ಕೆ ಕಬ್ಬಿಣದ ಪೀಸ್‌ಗಳನ್ನು ಕಟ್ಟಿಕೊಂಡಿದ್ರು.
ಓರ್ವ ಅಭ್ಯರ್ಥಿ ತನ್ನ ತೊಡೆಗೆ ಗೋದಿ ಹಿಟ್ಟನ್ನು ಮೆತ್ತಿಕೊಂಡು ಬಂದ್ದಿದ್ದಾನೆ. ಇಲಾಖೆಯ ಸಿಬ್ಬಂದಿ ಪರಿಶೀಲನೆ ವೇಳೆ ಅಭ್ಯರ್ಥಿ ಕಳ್ಳಾಟ ಬಯಲಾಗಿದೆ. ಸದ್ಯ ಅಭ್ಯರ್ಥಿಯನ್ನು ನೇಮಕಾತಿ ಪ್ರಕ್ರಿಯೆಯಿಂದಲೇ ಕೈಬಿಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ಕೇಸ್ ದಾಖಲಿಸದೆ ಬಿಟ್ಟು ಕಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


