ಕುಂದಗೋಳ: ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಇಂದು ಬೆಳ್ಳಂಬೆಳಗ್ಗೆ ನುಗ್ಗಿದ ನಾಯಿಯೋ, ತೋಳಯೋ, ನರಿವೋ ಎಂದು ತಿಳಿಯದ ಪ್ರಾಣಿ ಬರೋಬ್ಬರಿ 9 ಜನರಿಗೆ ಕಚ್ಚಿ ಗಾಯಪಡಿಸಿದ ಘಟನೆ ಕುಂದಗೋಳ ತಾಲೂಕಿನ ಬೆನಕನಹಳ್ಳಿಯಲ್ಲಿ ನಡೆದಿದೆ.
ಗಾಯಾಳುಗಳೆಲ್ಲಾ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ ಆಗಿಲ್ಲಾ.ಮನುಷ್ಯರನ್ನೇ ಅಲ್ಲದೇ ಜಾನುವಾರುಗಳ ಮೇಲೆ ದಾಳಿ ಮಾಡಿದ ಪ್ರಾಣಿ ಅವುಗಳಿಗೂ ಕಚ್ಚಿ ಗಾಯಪಡಿಸಿದೆ.
ಇಂದು ಬೆನಕನಹಳ್ಳಿ ಗ್ರಾಮಕ್ಕೆ ಮಬ್ಬು ಕತಲಲ್ಲಿ ನುಗ್ಗಿದ ಪ್ರಾಣಿ, ಕಸ ಗುಡಿಸುವವರು, ಜಾನುವಾರು ಹೊರಗೆ ಕಟ್ಟುವವರು, ಗೋಧಿ ಕೀಳಲು ಹೋದವರ ಮೇಲೆ ದಾಳಿ ಮಾಡಿದೆ. ಒಟ್ಟಾರೆ ಯಾವುದೋ ಪ್ರಾಣಿ ಜನರ ರಕ್ತದ ರುಚಿ ನೋಡಿ ಓಡಿ ಹೋಗಿದೆ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ಸುರೇಶ್ ಬಾಬು ಎಂ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


